ಓ ಮಲೆನಾಡಿನ ಮಲ್ಲಿಗೆಯೇ

ನೀ ಮೆಲ್ಲಗೆ ಕಂಪಬೀರಿದೆ ನನ್ನೆದೆಗೆ

ನಿನ್ನ ಸನಿಹಯ ನನ್ನ ಸೆಳೆಸೆಳೆದು ಬಿಟ್ಟೆ

ನಾ ನಿನ್ನ ಗುಲಾಮನಾದೆ ಓ ಮಲ್ಲಿಗೆ.

 

ಓ ಮಲೆನಾಡಿನ ಮಲ್ಲಿಗೆಯೇ

ನಿನ್ನ ಕದ್ದು ಕದ್ದು ನೋಡಲೆಂದೆಯೇ

ನಾ ದುಂಬಿಯಾಗಿ ಬಂದಿರುವೆ

ನಿನ್ನ ಚೆಲುವಿನ ಸವಿ ಸವಿ ಸವಿಯಾಗಿ ಸವಿಯಲು

 

ಓ ಮಲೆನಾಡಿನ ಮಲ್ಲಿಗೆಯೇ

ನೀ ಮೆಲ್ಲಗೆ ನನ್ನ ಹೃದಯವ ಕದ್ದಿರುವೆ

ನಾ ನಿನ್ನ ಪ್ರೀತಿಯಿಂದ ಹೃದಯವ  ಕದ್ದಿರುವೆ

ನಿನಗೆ ಹೇಳದೆ ಕೇಳದೆ ನಿನ್ನ ಹೃದಯವ ನಾ ಕದ್ದಿರುವೆ.

                                  -ಹೆಚ್.ವಿರುಪಾಕ್ಷಪ್ಪ ತಾವರಗೊಂದಿ