ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನದು . ಬೆಲೆ ಸುಮಾರು ೧೫ ರೂಪಾಯಿ ಇದ್ದು ಚಾಮರಾಜಪೇಟೆಯ ಸಾಹಿತ್ಯಪರಿಷತ್ ಕಛೇರಿಯಲ್ಲಿ ಸಿಗುತ್ತದೆ. ಅಂತರ್ಜಾಲದಲ್ಲಿ ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028973" target="_blank" title="ಇಲ್ಲಿ"___ಇಲ್ಲಿ ಇದೆ.
ಈ ಪುಸ್ತಕದ ವಿಶೇಷವೇನಪ್ಪಾ ಅಂದರೆ ಇದನ್ನು ಬರೆದಿರುವದು ('ಇಂಗ್ಲೀಷ ಗೀತೆಗಳು' ಖ್ಯಾತಿಯ , ನವೋದಯ ಸಾಹಿತ್ಯದ ಹರಿಕಾರರಾದ ಬಿ.ಎಂ.ಶ್ರೀಕಂಠಯ್ಯ . ಇದರಲ್ಲಿ ಕನ್ನಡ ನಾಡಿನ ಹೆಮ್ಮೆಯನ್ನು ಹಾಡಿರುವ ಕವಿಗಳಿಂದ ಆಯ್ದ ತಿರುಳು ಇದೆ. ೭ನೇ ಶತಮಾನದಿಂದ ೨೦ನೇ ಶತಮಾನದವರೆಗಿನ ಕನ್ನಡ ಸಾಹಿತ್ಯದ ಸಂಗ್ರಹ ಇದೆ. ಎರಡು ಸಾವಿರ ವರ್ಷದ ಜೀವಾಳ ಇದೆ. ಕನ್ನಡ ಲಿಪಿಯ ಅಕ್ಷರಗಳನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸುವ ಕ್ರಾಂತಿಕಾರೀ ಬದಲಾವಣೆಯ ಪ್ರಸ್ತಾಪ ಇದೆ. ( ಇದನ್ನೇ ಯಾರೋ ಮತ್ತೆ 'ಹೊಸದೆಂಬಂತೆ ನೆಟ್ಟಿನಲ್ಲಿ ಸೂಚಿಸಿದ್ದರು!) . ಹೊಸ ರೀತಿಯಲ್ಲಿ 'ಏರಿಸಿ ಹಾರಿಸಿ ಕನ್ನಡದ ಬಾವುಟ' ವನ್ನು ನೋಡಿ.
ಶಾಸನಗಳು , ಪೂರ್ವ ಸಾಹಿತ್ಯ , ನಾಡಪದಗಳು , ಇಂದಿನ ಪದ್ಯಗಳು ಎಲ್ಲದರ ಪ್ರಾತಿನಿಧಿಕ ಸಂಕಲನ ಇದು . ಇಲ್ಲಿ ಏನೇನು ಇದೆ ,ಎಂದು ನೀವೇ ನೋಡಿ .
ಪ್ರತಿಕ್ರಿಯೆ (1)