ಈ ದಿನ ನನಗೆ ತುಂಬಾ ತುಂಬಾ ಸಂತೋಷವನ್ನು ಕೊಡುತ್ತದೆ..ಎಕೆಂದರೆ ನಾನು ಈ ದಿನ ನನ್ನಗುರುಗಳನ್ನು
ನೆನೆಸಿಕೊಂಡು ಖುಶಿಪಡುತ್ತೇನೆಹಾಗೂ ಮನದಲ್ಲಿಯೇ ಕೃತಜ್ಣತೆಯನ್ನು ಅರ್ಪಿಸುತ್ತೇನೆ....ನಿಜವಾಗಲೂ ನಾನು
ಅವರನ್ನು ನನ್ನಹೆಜ್ಜೆ-ಹೆಜ್ಜೆಗೂ ನೆನಪಿಸಿಕೊೞುತ್ತೇನೆ.ನಾನು ಪ್ರೌಢಶಾಲೆಯಲ್ಲಿದ್ದಾಗ ನನಗಬೋಧಿಸಿದ ಆ ಗುರು
ಗಳಂತೂ ನನ್ನ ಮನ;ಪಟಲದಲ್ಲಿ ಅಚ್ಚಳಿಯದೆ ನಿಂತು ಬಿಟ್ಟಿದ್ದಾರೆ....!
ಕನ್ನಡ ಹೇಳುತ್ತಿದ್ದ ಪೂಜ್ಯಶ್ರೀ ಎಚ್.ಎನ್.ಹಬೀಬ್ ಸರ್..
ಗುರುಗಳೆಂದರೆ ಹೀಗಿರಬೇಕು ಎನ್ನುವ ಕಲ್ಪನೆಯನ್ನು ಹುಟ್ಟುಹಾಕಿದ್ದರು..ಅವರ ಆ ಸರಳತೆ,ನಮಗೆಸಮಯದ
ಅರಿವಾಗದಂತೆ ಪಾಟದಲ್ಲಿಮೂಡಿಸುತ್ತಿದ ಅಭಿರುಚಿ,ಲಗ್ನತೆ ನಿಜವಾಗಲೂ ಉಳಿದ ಗುರುಗಳಿಗಿಂತ ಅವರನ್ನು
ಎತ್ತರದಲ್ಲಿ ಕೂಡಿಸಿತ್ತು.....ವಿದ್ಯಾರ್ಥಿಗಳೆ ಗುರುಗಳ ನಿಜವಾದ ನಿರ್ಣಾಯಕರು.....!! ಇದನ್ನು ನಾನೂ ಗು
ರುವಾದಾಗ ಅರಿತುಕೊಂಡ ಸತ್ಯ..!
ಅವರಲ್ಲಿರುವ ಆ ಜ್ಣಾನದ ಅರಿವಿನ ಆಳದಲ್ಲಿ ಮುಳುಗಿದಾಗ ನಮಗೆ ಸಮಯದ ನೆನಪೆಲ್ಲಿ..?! ನಿಶ್ಶಬ್ದದ
ಆ ವಾತಾವರಣ ನಮಗೆ ನಮ್ಮಿರುವನ್ನೆ ಮರೆಸಿಬಿಡುತಿತ್ತು....!
ವ್ಯಾಕರಣ ಚಂದಸ್ಸು ಎಲ್ಲವನ್ನೂ ನಿರರ್ಗಳವಾಗಿಹಳಗನ್ನಡವನ್ನು ಬಿಡಿಬಿಡಿಸಿ ಓದುವ ರೀತಿ ಅದರಲ್ಲಿಯ
ಅರ್ಥವತ್ತಾದ ಏರಿಳಿತ...!! ಎನೆಂದು ಹೇಳಲಿ ಆ ದಿನಗಳು...!ಆ ಪಾಟಗಳು...!!
ನನಗನಿಸುತ್ತೆ ಒಂದಿನಾನು ಆ ಅವಧಿಗಳನ್ನು
ತಪ್ಪಿಸಿಕೊಂಡದ್ದಿಲ್ಲ....!ಅವರ ಶಿಕ್ಶೆಯೂ ಅಷ್ಟೆ ಸರಳ..ಮೂದಲಿಕೆಯ ಒಂದೆರಡು ಮಾತುಗಳು...ಇಲ್ಲ
ಬೆಂಚಿನ ಮೇಲೆ ಎದ್ದುನಿಲ್ಲಿಸುವುದು....,ಹೊರಗಡೆ ಅವಧಿ ಮುಗಿಯುವವರೆಗೂ ನಿಲ್ಲಿಸುವುದು.....!ಎಂದೂ
ಬೆತ್ತವನ್ನು ಹಿಡಿದವರಲ್ಲ....!! ಅಷ್ಟಕ್ಕೆ ಹಿಡಿ ಮುದ್ದೆಯಂತಾಗಿ ಬಿಡುತ್ತಿದ್ದೆವು...!!
ಇನ್ನೊಬ್ಬ ರು ಪೂಜ್ಯ ಶೀ ಎಸ್,ಬಿ.ಪಾಟಿಲ್ ಸರ್......
ಸಮಾಜ ಹಾಗೂ ಕನ್ನಡವನ್ನೂ ಬೋಧಿಸುತ್ತಿದ್ದರು...ಅವರು ಮುಖ್ಯಾಂಶಗಳನ್ನು ಬೋರ್ಡಿನ ಮೇಲೆ ಬರೆದು
ನಂತರ ಬೋಧನೆಗೆ ನಿಲ್ಲುತ್ತಿದ್ದರು.ಅವರೆಂದೂ ಕುರ್ಚಿಯಲ್ಲಿ ಕುಳಿತುಕೊಂಡು ಪಾಟಮಾಡಿದ್ದನ್ನು ನಾವೆಂದೂ
ಕಾಣಲಿಲ್ಲ....ಅವರ ಬಾಯಿಂದ ಹೊರಡುವ ಆ ವಿಷಯಗಳ ಅಗಾಧಹಿಡಿತ ನಮ್ಮ ಮನಸ್ಸನ್ನು ಹಿಡಿದಿಟ್ಟಿದ್ದು
ವಿಶೇಷವೇನಲ್ಲ......ನಮ್ಮ ಕೋಣೆಯೊಳಗೆ ಬರುವ ಮುಂಚೆ ಒಂದು ತಾಸು ಅವರ ಕಥಿಣ ಅಧ್ಯಯನ...ಅವ
ರ ಪ್ರಾಮಾಣಿಕ ಕಾಳಜಿಗೊಂದು ಸಾಕ್ಷಿ.ಅವರು ಹೇಳುತ್ತಿದ್ದ ಕನ್ನಡ ನನಗೆ ಎಷ್ಟುಹಿಡಿತಕ್ಕೆ ಸಿಕ್ಕಿತ್ತು ಎಂದರೆ
ನಾನು ಸ್ನಾತಕೋತ್ತರ ಪದವಿಯನ್ನು ಕನ್ನಡದಲ್ಲಿಭಾಹ್ಯವಾಗಿ ಪಡೆದುಕೊೞಲು ಯಾವ ಭಾಷಾ ಕಟಿಣತೆಯೂ ಅಡ್ಡಿ ಆಗಲಿಲ್ಲ... ಅಷ್ಟರ ಮಟ್ಟಿಗೆ ಆ ವಿಷಯದಲ್ಲಿ ಪ್ರಾವೀಣ್ಯತೆ ಸಾಧಿಸುವಂತೆ ಆಗಲೇ ರೂಢಿಸಿದ್ದರು ...ನಮ್ಮ ಕಾಲದ ನಮ್ಮ ಗುರುಗಳು..!!!
ಆಗ..ಆ ಸಮಯದಲ್ಲಿ ನಾಗರಿಕ ಸೇವಾ ಪರಿಕ್ಷೆಗಳ ಬಗೆಗೆ ಅರಿವನ್ನು ಮೂಡಿಸುತ್ತಿದ್ದು...ನನ್ನ ಮನದಲ್ಲಿ ಅ
ದು ಹೆಮ್ಮರವಾಗಿ ಬೆಳೆದು ನಿಂತು ನನ್ನನ್ನು ಆ ನಿಟ್ಟಿನಲ್ಲಿ ಮುಂದುವರೆಯುವಂತೆ ಮಾಡಿದ್ದು ಹಾಗೂ ದಕ್ಕಿಸಿಕೊಂಡ ಯಶಸ್ಸನ್ನು
ಅವರಿಗೊಂದು ನನ್ನ ಸಣ್ಣ ಕಾಣಿಕೆಯೆಂದೇ ಅರ್ಪಿಸಿರುವೆ...ಚಲ ಮೂಡಿಸುವ ಆ ಮಾತುಗಳು....ಪಾ
ಟದಲ್ಲಿ ಆ ಪರಿಆಸಕ್ತಿಮೂಡಿಸುತ್ತಿದ್ದ ಆ ಕಲೆ..ಆ ಗುರುಗಳಿಗೇ ಸಾಧ್ಯ..!
ಅವರೆಂದೂ ಸಿಟ್ಟು ಮಾಡಿಕೊಂಡು ರೇಗಿದ್ದು ನನಗೆ ನೆನಪಿಲ್ಲ....ಅಷ್ಟು ನಂಬಿಕೆ ಅವರಿಗೆ ಅವರ ಜ್ಣಾನದ ಬಗೆಗೆ
ಇತ್ತೇನೋ...!ಅನಿಸದೆ ಇರದು....ಆ ನಗುಮುಖ,ಅವರಸರಳ ಬೋಧನೆ ,ಅವರು ಪರಿಕ್ಷಿಸುವ ಸಾಮಾನ್ಯ
ಜ್ಣಾನ,ಕುಲ,ಗೋತ್ರ ,ಬಡವ ಬಲ್ಲಿದನೆನ್ನದೆಮೆಚ್ಕ್ಷ್ಚಿಕೆಗೆ ಮಯ್ ದಡವುತ್ತಿದ್ದ ಆ ಮಿಂಚಿನ ಕ್ಷಣಗಳು..
ಕಾಯಕದಲ್ಲಿ.ಅವರು ತೋರಿಸುತ್ತಿದ್ದ ಆ ನಿಶ್ಟೆ..ನಮ್ಮ ಮನೆಗೆಲಸದ ವಿಷಯವನ್ನುತುಂಬಾ ಎಚ್ಚರಿಕೆಯಿಂದ ಅವರು ಪರಿಕ್ಷಿಸು
ತ್ತಿದ್ದ ರೀತಿ,ತಿದ್ದಿ,ತೀಡುವ ಅವರ ತಾಳ್ಮೆ,,,,,,ಅದೆಲ್ಲಾ ನಾನೀಗ ನನ್ನ ಮಕ್ಕಳೊಂದಿಗೆತುಂಬಿದ
ಕಣ್ಣುಗಳೊಂದಿಗೆ ತುಂಬಾ....ತುಂಬಾನೇ ಮಿಸ್ ಮಾಡ್ಕೊಳ್ತಾ ಇದ್ದೀನಿ !! ನನ್ನ ಮಕ್ಕಳು ಅವರ ಗುರುಗಳನ್ನು ನಿಂದಿಸುವುದನ್ನು
ನೋಡಿ ನಾನು ಆವಾಕ್ಕಾಗಿರುವೆ!.....ಅವರಂತೂ ಬೆಳೆದು ದೊಡ್ಡವರಾದರು...!!
ಸರ್...ತಮ್ಮ ಆದರ್ಶಗಳನ್ನು ಊರುವಮೂಲಕತಮ್ಮನ್ನು ಸದಾ ನೆನಪಿನಲ್ಲಿಡಲು ನನ್ನ ಹೞಿಯಲ್ಲಿ ಸ್ವಂತ
ಶಾಲೆಯೊಂದನ್ನು ತೆರೆದಿರುವೆ....!!ಆ ತಮ್ಮ ಉದಾತ್ತ ಚಿಂತನೆ, ತಮ್ಮ ಆದರ್ಶ, ನಾನು ನನ್ನ ಹೞಿ ಮಕ್ಕಳಲ್ಲಿ ಕಾಣುವ ಬಯಕೆ.....!!
ಗುರು ಬ್ರಹ್ಮ................
..............ಶ್ರೀ ಗುರುವೇ ನಮ;!!!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!