ಸಮುದ್ರ ಕಳೆದುಕೊಂಡ ಕನಸುಗಳನ್ನು ಅಲೆಗಳು
ಮರುಳ ತಂಪಿನಲಿ ಹುಡುಕುತ್ತವೆ ನೆನಪಾದಾಗೊಮ್ಮೆ
ಹಂಚಿಕೊಳ್ಳಲೆಷ್ಟೋ ದುಃಖಗಳಿವೆ ಕದಡಿದ ನೀರಲ್ಲಿ.
ಹರಳುಗಟ್ಟಿದ ಉಪ್ಪಲ್ಲಿ ಕೊಳೆಯದ ನೋವುಗಳಿವೆ,
 
ಕಾದ ದಂಡೆಗಳಿಗಿದೆ ಮುನಿಸು ಆದರೂ ಮೌನ
ಮಾತಾಗುತ್ತದೆ ಜೊತೆ ನಡೆವ ಹೆಜ್ಜೆಗಳಿಗೆ.ಅಳಿದ
ಹೆಜ್ಜೆಗಳಿಗೆಷ್ಟೋ ಕಥೆಗಳಿಗೆ ಸಾಕ್ಷಿಯಾಗಿ ದುರುಗುಟ್ಟುತ್ತವೆ
ಅಲ್ಲಿರುವ ಏರಿಳಿತದ ರಾಗಗಳಿಗೆ ಹುಣ್ಣಿಮೆಯೊಂದಿನಕ್ಕೆ
 
ಜಗಳ ಕಾಯುತ್ತವೆ ಬೆಳದಿಂಗಳ ಬೆಳಕಿನಲಿ.ಮರಳ
ಮೇಲೆ ಬರೆದ ಅದೆಷ್ಟೋ ಆಸೆಗಳ ಅಳಿಸಿ ನಡೆವ ಅವುಗಳು
ವಿಧಿ ನಿಯಮಿಸಿದ ಆಳುಗಳು.ತಮಗೆ ನೀಡಿದ ಕಾರ್ಯವನ್ನು
ಚಾಚೂ ತಪ್ಪದೆ ನರ್ವಹಿಸುವ ನಿಯಾಮಕಗಳು
 
ನಿಯಾಮಕಗಳಿಗೆ ಹಗಲು ರಾತ್ರಿ ಮಾತ್ರ ಗೊತ್ತು
ಸೂರ್ಯನನ್ನು ಕೆದಕದೆ ಬಿಟ್ಟ ಹೊತ್ತಿಗಷ್ಟೇ..!!