ಖಾಲಿ ರಾತ್ರಿ ಖಾಲಿ ಹಗಲು

ಖಾಲಿ ಹಾಳೆಗೆ ಇಳಿಸಬೇಕೆಂದಿದ್ದೆ,

ಕೊನೆಗೂ ತಾಜಮಹಲಿನ ಪ್ರೀತಿಗೆ

ಹಂಪೆಯ ವೇದನೆ ಅರ್ಥವಾಗುತ್ತಿಲ್ಲ

 

 

ಗಾಳಿಗುಂಟ ಮೋಡ ಸಾಗಿದಂತೆ

ಸಾಗುತ್ತವೆ ಕನವರಿಕೆಗಳು ಖಾಲಿ.

ಒಳಗಿನ ತಲ್ಲಣಗಳೇ ಸುತ್ತಿಕೊಂಡಿವೆ

ಜಗತ್ತನ್ನು ಇನ್ನಿಲ್ಲದಂತೆ ನೆಪವಾಗಿ.

 

ಗೊಮ್ಮಟನಂತೆ ನಿಂತ ಮರಕ್ಕೆ

ಬಳ್ಳಿಯೊಂದು ಅಡರಿಕೊಂಡು

ಮೈತುಂಬಾ ಎಲೆಮೊಗ್ಗು ಉಟ್ಟುಕೊಂಡು

ನಿಂತಿದೆ ಪ್ರತಿಸ್ಪರ್ಧಿಯಂತೆ..!

 

ಈ ಜಿನುಗುವ ಪ್ರೀತಿಗದೆಷ್ಟೋ

ಮಗ್ಗುಲುಗಳು,ಭೂಮಿ ಹೊರಳಿದಂತೆ

ಹಗಲು ರಾತ್ರಿಗಳಿಗೆ 

ಹದಗೊಂಡ ಮುಪ್ಪೊಂದು ಪ್ರ್ಷಶ್ನಿಸಿದಂತೆ..?!