ಮನದಲೊಂದು ಅಸೆಬಂದು,ತಂದೆನೊಂದು ಪುಟ್ಟ ಹಕ್ಕಿ,
ಕಣ್ಣ ಕಾಯ್ವ ರೆಪ್ಪೆಯಂತೆ,ಇಟ್ಟೆನದನು ಮನದ ಗುಡಿಯಲಿ.
ಕೊಟ್ಟೆನದಕೆ ಮನದ ಬೊಗಸೆ ತುಂಬು ಪ್ರೀತಿ ಕಾಳನು.
ಕಾಳ ತಿಂದು ರೆಕ್ಕೆ ಬಲಿತು, ಮನದ ಗೂಡು ಚಿಕ್ಕದೆಂದು,
ದೊಡ್ಡ ಮರವನಾರಿಸುತ್ತ , ಇದ್ದ ಗುಡಿಯನು  ಬಿಟ್ಟಿತೋ!

ಸಿರಿ