ಸೂರ್ಯ ಮುಳುಗುವ ಹೊತ್ತು
ಚಂದ್ರನಿಲ್ಲದ ರಾತ್ರಿ
ನಕ್ಷತ್ರಗಳ ಪರಿವೆಯೇ ಇಲ್ಲದ
ಪ್ರಶಾಂತ ಅಲೆಗಳ ಅಬ್ಬರದಲಿ
ಕೇಳಿಸದು ಕಡಲ ಅಂತರಂಗದ ಮೌನ!
ಚಂದ್ರನಿಲ್ಲ ರಾತ್ರಿ
ಕನಸುಗಳ ಪರಿವೆಯೇ ಇಲ್ಲದೆ
ಪ್ರಶಾಂತವಾಗಿ ಸುಳಿದ ಭಾವಗಳು,
ಮರೆತುಹೋದ ಮಾತುಗಳಲಿ ಅಡಗಿದೆ
ಎನ್ನ ಅಂತರಂಗದ ಆಸೆಗಳು
ಪ್ರಶಾಂತತೆಯ ಹಿಂದೆ ಅಡಗಿದೆ
ಚಂದಿರನ ನೋಡುವ ತವಕ
ಸುಮ್ಮನೆ ಕಳೆಯುತಿವೆ ಸೂರ್ಯ ಉದಯ-ಅಸ್ತಗಳು
ಮನದ ಕಡಲಾಳದ ಕತ್ತಲ ಅಳಿಸಲು
ಹುಡುಕುತಿರುವೆ ಬೆಳಕನು
- ಪ್ರಮಿತ
೧೦/೧೦/೨೦೦೭
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!