ಚೈತ್ರ ರಥವನೇರಿ

ಶುಭ ಯೋಗವ ತರುವ

ಹೊಸ ಯುಗ ಗೀತೆಗೆ

ಪಲ್ಲವಿ ಹಾಡುತ ಬಂದನು ಅರುಣ ¦¦ ೧ ¦¦

 

ರಂಗೇರಿದ ವಸುಂಧರೆಯ ಸೊಬಗ ನೋಡುತ

ಭ್ರಮರದ ತಂಬೂರಕೆ

ಹಕ್ಕಿಗಳು ಚಿಲಿ ಪಿಲಿ ಶ್ರುತಿ ಸೇರಿಸಲು

ಹಾಡಬೇಕೆನಿಸಿದೆ ಅನುಪಲ್ಲವಿ ¦¦ ೨ ¦¦

 

ಪಂಚಮದಲ್ಲಿ ಕೊಗಿಲೆಯು

ಸಂಗೀತ ಸುಧೆ ಹರಿಸಲು

ಹೃದಯ ವೀಣೆ ಮಿಡಿದಿದೆ ಮೋಹನ ರಾಗ

ಹಾಡಬೇಕೆನಿಸಿದೆ ಪ್ರೇಮ ರಾಗ ¦¦ ೩ ¦¦

 

ವಸಂತ ತರುವ ಹೊಸ

ಜೀವನದ ಲಹರಿಗೆ

ಗೆಜ್ಜೆ ಕಟ್ಟಿ ಕುಣಿಯಲು ಮನಸು

ನಾ ಹಾಡುವೆ ಹೊಸ ಬದುಕಿನ ಗೀತೆ ¦¦ ೪ ¦¦

 

 - ಪ್ರಮಿತ