ನೀ ಬಳಿಗೆ ಬಂದರೆ
ಮಳೆಯೊಂದು ಕರೆಯುವುದು
ಏತಕ್ಕೋ ಕಾತರಿಸಿ
ಬೆರಳುಗಳು ನಡುಗುವುವು

ನೀನೊಮ್ಮೆ ನುಡಿದರೆ
ಮಳೆಯೊಂದು ಕರೆಯುವುದು
ನಿಡುಗಾಲ ಮುಚ್ಚಿದ್ದ
ಹೊಗಲುಗಳು ತೆರೆಯುವುವು

ನಿನ್ನ ದನಿ ಕೇಳಿದರೆ
ಮಳೆಯೊಂದು ಕರೆಯುವುದು
ದುಂಬಿಯನು ಹಂಬಲಿಸಿ
ಕಾಮನೆಗಳು ಅರಳುವುವು

ನೀ ನನ್ನ ಮುಟ್ಟಿದರೆ
ಮಳೆಯೊಂದು ಕರೆಯುವುದು
ಬೆಳಕನ್ನು ಬಯಸುತ್ತ
ಹೂವುಗಳು ಬಿರಿಯುವುವು