ಕೊನೆಯಿರದಂಥ ಪ್ರೇಮವೊಂದಿರದು
ಎನ್ನುವ ಕಲ್ಪನೆ ಕೊನೆಯಾಯ್ತು
ಕಡಲಿನ ಆಳವು ಎಣಿಕೆಗೆ ಸಿಗದು
ಎಂಬುದು ಕೊನೆಗೂ ಅರಿವಾಯ್ತು

ಪ್ರಣಯವು ದೇಹದ ಕಾಮನೆಯಲ್ಲ
ಎಂಬುದನರಿಯದೆ ಧುಮುಕಿದ್ದೆ
ಏನನೂ ಕಳೆಯದೆ ಏನೇನೂ ಸಿಗದು
ನೆರವೇರವು ಮನಸ್ಸಿನ ಆಶೆಗಳು

ಹಳತರ ಕಡೆಗೆ ಹೊಸತರ ತೊಡಕ
ಜೀವನವೆರಡೂ ಸೇರಿರಲು
ಮೊದಲನೇ ಪಯಣ ಪರಾಜಯವಾಯ್ತು
ಇನ್ನೂ ಇಲ್ಲವೇ ಹಾಯಿಗಳು

ನಿಜ ಭಾವನೆಯ ಹುಡುಕುತ್ತ ಅರಿಯದೆ
ಕೊನೆಯನು ಕೊಳ್ಳದು ಈ ಪಯಣ
ನಿಜವನ್ನು ಅರಿಯದ ಹುಡುಗಾಟದಲಿ
ಕೊನೆಯನು ಕೊಳ್ಳದೆ ಈ ಪ್ರಣಯ