ಹೊಸತು ಈ ಯೋಚನೆ | ಮನದಲ್ಲಿ ಇರದ ಹೊಸ ಭಾವನೆ |
ಏಕೋ ಹೊಸ ಕಲ್ಪನೆ | ಕಣ್ಣಿನಲ್ಲಿ ಏನೋ ಹೊಸ ಹವಣಿಕೆ |
ಎಂದೂ ಬಾರದಂಥ ಭಾವ | ಇಂದು ಮೂಡಿ ಮರೆಯಾಯಿತು |
ಎಲ್ಲೋ ಕೇಳಿದಂಥ ರಾಗ | ಒಮ್ಮೆ ಕೇಳಿ ಮಸುಕಾಯಿತು |
ಕಡಲ ತಡಿಯ ಮರಳಿನ ಮೇಲೆ | ಬರೆದ ಸಾಲು ನಿಜವಾಯ್ತು |
ಎದೆಯಾ ಗಸದ ಕಾಮನ ಬಿಲ್ಲು | ಬಣ್ಣ ಸೇರಿ ಪಟವಾಯ್ತು |
ಕಾಡುತಿದೆ | ಎದೆಯೊಳಗೆ | ಎಂದೂ ಇದ್ದೂ ಇರದಂಥ ಭಾವ |
ಕೇಳುತಿದೆ | ದೂರದಲಿ | ಕಾಡುತ್ತಿದ್ದ ಪ್ರೇಮದ ಗಾನ |
ಭಾವ ಪಲ್ಲಟ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!