___LINK_OPEN_href="http://4.bp.blogspot.com/-ujrqooeTHms/URvy_Lv8nXI/AAAAAAAAVsY/M-LCyVu1Q9g/s1600/566289_4272978897950_1625325286_n.jpg" imageanchor="1"___

 

 

ಮೆಲುನಗೆಯ ಸವಿಸೊದೆಯಲೆಸೆವಂಥ ಮುಖಕಮಲ
ಚೆಲುವಾದ ನವಿಲುಗರಿ ಸಿಂಗರದ ಕುರುಳು
ಬಲುನಂಜು ವಿಷಯಸುಖದಲಿ ನೆಟ್ಟ ಮನವನ್ನು
ನಿಲಿಸಿತೈ  ಪೊಳೆವಗಣ್ಣನಲೀಗ ಬಿಡದೆ!


ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ, ಆಶ್ವಾಸ - ಪದ್ಯ ೫) :

ಮಧುರತರ ಸ್ಮಿತಾಮೃತವಿಮುಗ್ಧ ಮುಖಾಂಬುರುಹಂ
ಮದಶಿಖಿ ಪಿಂಛಲಾಂಛಿತ ಮನೋಜ್ಞ ಕಚಪ್ರಚಯಮ್ |
ವಿಷಯವಿಷಾಮಿಷಗ್ರಸನದಗೃಧ್ನುಷಿ ಚೇತಸಿ ಮೇ
ವಿಪುಲವಿಲೋಚನಂ ಕಿಮಪಿ ಧಾಮ ಚಕಾಸ್ತಿ ಚಿರಮ್ ||

 

-ಹಂಸಾನಂದಿ

ಕೊ: ಆದಷ್ಟೂ ಮೂಲದ ಭಾವವನ್ನು ಹಿಡಿದಿಡಲು ಯತ್ನಿಸಿದ್ದರೂ, ಪೂರ್ತಿ ಯಶಸ್ವಿಯಾಗಿರುವೆನೆಂದು ಹೇಳಲಾಗದು!


ಕೊ.ಕೊ: ಸೊದೆ = ಸುಧೆ, ಅಮೃತ


ಚಿತ್ರ ಕೃಪೆ: ಕಲಾವಿದ ಶ್ರೀ ___LINK_OPEN_data-blogger-escaped-target="_blank" href="https://www.facebook.com/keshav.keshav"___ಕೇಶವ್ ವೆಂಕಟರಾಘವನ್ - ಅವರ ಈ ಚಿತ್ರವನ್ನು ನೋಡಿದಾಗ, ಅದಕ್ಕೆ ಹೊಂದುವಂತಹ ಪದ್ಯವೇ ಬೇಕೆಂದು ಹುಡುಕಿ ಮಾಡಿದ ಅನುವಾದವಿದು.