ಮನದಲ್ಲಿ ಇಂದೇಕೋ
ತಳಮಳ ಕ್ಷಣಗಳು
ಎಂದೋ ಒಂದು ದಿನ
ಎಲ್ಲೋ ನೋಡಿದ
ಸುಂದರಿಯ ಅಸ್ಪಷ್ಟ ಚಿತ್ರ
ಅವಳಿಗೂ ನನಗೂ
ಯಾವುದೇ ಸಂಬಂಧವಿಲ್ಲ
ಅನುಬಂಧವಿಲ್ಲ
ರಾಗ-ದ್ವೇಷಗಳ ಭಾವನೆಯಿಲ್ಲ
ಆದರೂ ಎಡೆಬಿಡದೆ ಕಾಡುತಿದೆ
ಅವಳ ನೆನಪು
ನೀರವ ರಾತ್ರಿಯಲಿ
ಮಿಂಚು ಹುಳದಂತೆ ಬಂದು
ಮರುಕ್ಷಣವೇ ಮರೆಯಾದ
ಅವರ ಹೆಸರು, ಊರು-ಕೇರಿ
ಯಾವುದೂ ಅರಿಯದು
ಎನ್ನ ಮನ
ಕೃಷ್ಣ ಸುಂದರಿಯ
ತುಂಟ ನಗು, ಓರೆ ನೋಟ
ವೈಯಾರದ ನಡೆ
ಬಳುಕುವ ಸೊಂಟ
ಮತ್ತೆ-ಮತ್ತೆ ಮನದಲ್ಲಿ
ಮೂಡಿದೆ ಇಂದು
ಸಂತೆಯಲ್ಲೋ, ಜಾತ್ರೆಯಲ್ಲೋ
ಬಸ್ ನಿಲ್ದಾಣದಲ್ಲೋ
ಯಾವ ತಾಣವದು
ಅವಳ ಭೇಟಿಯಾದದ್ದು
ಎಂಬುದು ಅರಿವಿಲ್ಲದಿದ್ದರೂ
ಕಾಡುತಿದೆ ಅವಳ ನೆನಪು
ತಲೆಬರಹವಿಲ್ಲದ ಕವಿತೆಯಂತೆ ....
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೀಂಗsss ಒಮ್ಮೊಮ್ಮೆ
ಸಖೀ ಗೀತ
ಪ್ರಸವ..
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!