ಮನದ ಮೌನದಲ್ಲಿ ಮಾತು ಮುರಿದು ಬಿದ್ದಿದೆ
ಕಣ್ಣ ಅಂಚಿನಲ್ಲಿ ಭಾವ ಜೀವವಾಗಿ ಹರಿದಿದೆ
ಉಸಿರ ತಂತಿ ಹರಿದು ವೀಣಾ ನಾದ ಹೊಮ್ಮಿದೆ
ಕನಸು ಖಾಲಿಯಾಗಿ ಬಾಳು ಯಾತ್ರೆ ಮುಗಿಸಿದೆ
ಬಂದು ಹೋಗೋ ಜಾತ್ರೆಗೇಕೆ ಪ್ರೀತಿ ಒಪ್ಪಾರು
ಕುಡಿದು ಮುಗಿದ ಲೋಟದಲ್ಲೇ ಉಳಿದ ಮಂಪರು
ಸಿಗದೆ ಇರುವ ಪ್ರೀತಿಯಲ್ಲೆ ಎಲ್ಲಾ ಬಂಪರು
ಮಾತು ಮುಗಿಸಿ ಹೋಗೋ ಜಾಣ ಹೃದಯ ಪಂಚರು
ಬೆಳಕ ನೋಡೋ ಕಣ್ಣಲೇಕೆ ಎಲ್ಲಾ ಕತ್ತಲು
ಎಲ್ಲಾ ಇದ್ದರೂ ಪ್ರೀತಿ ಸಿಗದ ಗೊಂಚಲು
ನನ್ನ ಮನಸು ನಿನ್ನ ಬಿಡದೆ ಸುತ್ತಲು
ವೇದ ಹೇಳೋ ಮಾತಿನಲ್ಲಿ ಮೌನ ಬೆತ್ತಲು ...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!