ನಿನ್ನ ನಗುವ ಹೊನಲನ್ನು
ಬಚ್ಚಿಡುವ ಕಲೆಯನ್ನು
ಎಲ್ಲಿಂದ ಕಲಿತೆ ನೀ ಜಾಣೆ
ನಿನ್ನ ಪ್ರೀತಿ ನನಗಾಗಿ ತಾನೆ.
ನಾ ಕನಸಲ್ಲಿ ಬೇಡುವೆ
ನಿನ್ನ ನನಸಲ್ಲಿ ಕಾಯುವೆ
ನಸುಕಲ್ಲಿ ನಿನ್ನಲ್ಲೇ ಮೂಡುವೆ
ಶಶಿ ಕೂಡೆ ಬೆಂಬಿಡದೆ ಕಾಡುವೆ.
ಗರಿಗೆದರೊ ಹಕ್ಕಿಗೆ ಓಲೆ
ಕಟ್ಟಿರುವೆ ಮನಸಾರೆ ಬಾಲೆ
ಅದನೊಮ್ಮೆ ನಿನೋದು ಒಲವೆ
ನಗುವನ್ನು ಮರೆಸದೆ ಚೆಲುವೆ....
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!