ಮುನಿಸಿಕೊ೦ಡಳೆ೦ದು ಸುಮ್ಮನಾಗ ಬೇಡ ಇನಿಯ,
ಹುಸಿಮುನಿಸ ಸಲ್ಲು ಗೊತ್ತಿಲ್ಲವಾ ನಿನಗೆ...
ಚ೦ದ್ರ ತಾರೆಗಳ ಕೊಡಿಸಬೇಕಿಲ್ಲ ನನಗೆ..
ಸಪ್ತ ಸಾಗರದ ವಿಹಾರವು ಬೇಕಿಲ್ಲ ಈ ಹೃದಯಕೆ..
ಎನ್ನ ಮೌನದ ಕರೆಯ ಕೇಳಿ, ಕೈ ಹಿಡಿದು ಕಣ್ಣಲ್ಲೇ ರಮಿಸು ಬಾ..
ಬೇರೆನು ಬಯಸದು...ಸಾಕು ಈ ಮನಕೆ!!
ನಿನ್ನ ಕಿರುಬೆರಳ ಕೇಳುತಿದೆ ಈ ನನ್ನ ಪುಟ್ಟ ಕೈ..
ಕೈ ಹಿಡಿದು ಕರೆದೊಯ್ಯು ನಿನ್ನೊಳವಿನೂರಿಗೆ..
ಭಯವಾದರು ಬರುವೆನು, ನಿನ್ನ ಗಟ್ಟಿ ಹಿಡಿದು..
ನಿನ್ನಲ್ಲೇ ಕಳೆದುಹೋದರು...ಚಿ೦ತೆ ಇಲ್ಲ ಮನಕೆ!!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!