ಪ್ರೀತಿಯ ರಸದಮೃತವ ಉಣಿಸಿದ ಗೆಳೆಯನೇ,
ದೂರ ಸರಿದೆ ಏಕೆ ಇಲ್ಲ ಸಲ್ಲದ ನೆವವ ಹೂಡಿ..
ಮನದ ತೋಟದಿ ನೆಟ್ಟ ನೂರಾರು ಹೂಗಳು,
ಕ೦ಡವು ಸಾವಿರ ಹಗಲು ಕನಸುಗಳ..
ನೆಟ್ಟ ಹೂವು, ಒಣಗಿ ಬಾಡಿ ನಿ೦ತಿವೆ ಜೀವವಿಲ್ಲದೆ..
ಏನ ಮಾಡಲಿ ಇದನು? ತೆಗೆದೊಯ್ಯಲೆ ಬೇರಿ೦ದ?
ಇಲ್ಲ, ಕಣ್ಣೀರುಣಿಸಿ ಬದುಕಿಸಲೇ.. ನೀ ಮತ್ತೆ ಬರುವವರೆಗೆ...!?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!