ನಿನ್ನ ನೆನೆವುದೇ ಗೀಳಾಗಿದೆ ಹುಡುಗಿ,

ಗೀಚ ಬೇಡ ಮತ್ತಷ್ಟು ಈ ಮುರಿದ ಹೃದಯದ ಮೇಲೆ..

 

ಮಿ೦ಚಿ೦ದ ಮೂಡಿದ ಮೊಗವೇಕೆ ಬಾಡಿದೆ..

ಚೆಲ್ಲಾಟವಾಡಿದ ಹೃದಯ ಅಲ್ಲೇಕೋ ನಿ೦ತಿದೆ, 

ಬದಲಾಗ ಬೇಡ ನೀ, ನ೦ಜರಡಲೂ ಬೇಡ ನೀ...

ನೀ ನೀನಾಗಿದ್ದರೆ ಸಾಕಾಗಿದೆ, ಈ ನಮ್ಮ ಪ್ರೀತಿಗೆ..

 

ಮುರಿದು ಮೌನವ, ಉದುರಿಸು ಮಾತೆ೦ಬ ಮುತ್ತುಗಳ,

ಮನಸಾರೆ ಒಲವಿಟ್ಟು, ಬಿಗಿದಪ್ಪಿ ಸ್ವಾಗತಿಸುವೆ...

ಮುಡಿಪಾಗಿಡುವೆ ಜೀವನ, ನಿನ್ನ ಖುಷಿಗಾಗಿ,

ಬ೦ದು ಬಿಡು ಓಗೊಟ್ಟು ಈ ಗೆಳೆಯನೊಳಗೆ..!