ಜೀವ ಭಾವ ಮೀಟಿದೆ
ಒಲವಿನ ಪಲ್ಲವಿ ಹಾಡಿದೆ
ನನ್ನೆದೆಯಲ್ಲಿ ಮೊಗ್ಗೊಂದು ಅರಳಿದೆ
ಕಾಣದ ಸುಖ ಜಿನುಗಿದೆ
ಶೃಂಗಾರ ರಸ ಚಿಮ್ಮಿದೆ
ದೇಹ ಸೊರಗಿದೆ,,,ಸ್ಪರ್ಶ ಕಾಣದೆ
ಹೊಸ ಬಯಕೆ,,, ಹೊಸ ಆಲೆ
ತಣಿಯದ ದಾಹ ಮನದಲಿ
ಏನೇನೊ ಕೋಲಾಹಲ ಎದೆಯಲಿ
ತಾಳೆನು ಈ ವಿರಹದಾ ನೋವಾ
ಸನಿಹ ಬಯಸಿದೆ ಜೀವಾ
ಚಿಮ್ಮಿಸು ಪ್ರೇಮದ ಭಾವ
ಬಿಸಿಅಪ್ಪುಗೆಯ ಹಿತನೀಡು ಬಾ
ಸ್ವರ್ಗಸುಖ ನೀಡು ಬಾ
ಕಂಡ ಕನಸು ನನಸು ಮಾಡು ಬಾ
ಮೃದು ಸ್ಪರ್ಶದಿ ಮುದನೀಡುಬಾ
ಮತ್ತಿನ ಮಳೆ ಸುರಿಸು ಬಾ
ಪ್ರಣಯ ರಾಗ ನುಡಿಸು ಬಾ
ಮೊಹನ ಮನ್ಮಥ ನೀನು
ಕನಸುಗಳ ಸರದಾರ ನೀನು
ಚೆಲುವ ರಸಿಕ ನೀನು
ಮನಸ್ಸು ನಿನ್ನ ಆಗಮನಕ್ಕೆ ಹಾತೊರೆದಿದೆ
ಮೈ ಮನ ಕ್ಷಣ ಕ್ಷಣವೂ ಪುಳಕಗೊಳ್ಳುತಿದೆ
ತನುವು ನಿನ್ನಯ ಸನಿಹ ಬಯಸಿದೆ
ದಾಹ ತಣಿಯಲಿ
ವಿರಹ ವೇದನೆ ಮುಗಿಯಲಿ
ಪ್ರಣಯ ಗೀತೆಮೊಳಗಲಿ
ಬಾ ಇನಿಯ ಬಾ
,,,,,,,,ಪ್ರಕಾಶ ತದಡಿಕರ್,,,,,,,,,,,,,,,
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!