ಭಾವನೆಗಳಿಗೆ ಜೀವ ತುಂಬುವ ಕನಸುಗಾರ
ನೀನೆ ನನ್ನ ಪ್ರೇಮ ಸ್ಫೂರ್ತಿಯ ಸರದಾರ
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನಿನ್ನ ನಿರ್ಮಲ ಪ್ರೀತಿ ಸಾಕು ಈ ಜನುಮದಲ್ಲಿ
ಆಗಲಿ ನಮ್ಮ ಹೃದಯಗಳ ಸಂಗಮ
ಪ್ರೇಮ ಭಾವನೆಗಳ ಸಮಾಗಮ
ಭಾವ - ರಾಗಗಳ ಶೃತಿ ಮೀಟಿದರೆ ಸಂಗೀತ
ನಮ್ಮಿ ಹೃದಯ ಸೇರಿದರೆ ಸವಿ ಕನಸೊಂದು ಜೀವಂತ
ನೀಲ ಮೇಘ ತಣ್ಣನೆ ಗಾಳಿ ಬೀಸಿ ಹೊಸ ತಾನ ನುಡಿಸಿವೆ
ಝುಳುಝುಳು ಹರಿವ ನೀರು ಶುಭ ಗೀತೆ ಹಾಡುತಿವೆ
ನಿನ್ನ ಪ್ರೇಮ ನೌಕೆ ನನ್ನೆಡೆಗೆ ಸಾಗಿ ಬರಲಿ
ಹೊಂಗನಸ್ಸಿನ ಆಶಾ ಕಿರಣ ತುಂಬಿ ಹೃದಯ ಅರಳಲಿ
ಬಾಳ ನೌಕೆಯಲ್ಲಿ ನಿನ್ನೊಡನೆ ಪಯಣಿಸುವ ಆಸೆನೋಡು
ಬಾ ಜೊತೆಗಾರ ,ನನ್ನ ಬಾಳ ಪುಟಕೆ ಹೊಸ ತಿರುವು ನೀಡು
ಹರೆಯವು ಕರೆದಿದೆ,ತನು ಮನ ಸೆಳೆದಿದೆ
ಪ್ರಣಯ ಕಡಲ ಅಲೆಯು ತೇಲಿ ಬಂದು ಹೃದಯ ಸೇರಿದೆ
ಹೃದಯ ಕೂಗಿ ಕರೆಯುತಿದೆ ಬಾ ಇನಿಯ ಇಂದೇ
ನೀನು ಬರದೆ ಹೋದರೆ ಈ ಬದುಕೇಕೆ ಇನ್ನು ಮುಂದೆ
-------------ಪ್ರಕಾಶ ತದಡಿಕರ್-----------
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!