ಮುಗ್ಧ ಮನಸ್ಸಿನ

ಸ್ನಿಗ್ಧ ಕಲ್ಪನೆಗಳ

ಸವಿ  ನೆನಪು   

ಮಧುರ ಕನಸು

ಆ ಸವಿಗನಸಲ್ಲಿ

ಸೌಮ್ಯತೆಯ

ಚರಮಸೀಮೆಯ

ಮೀರಿದ ಸ್ವಪ್ನ ಸುಂದರಿ

ಮನದಾಳವನು ತಟ್ಟಿ

ಜೊತೆ ಸೆಳೆದು

ಒಲವ ಸಿಂಚಿಸಿ

ಹೃದಯ ಪ್ರೇಮ ಮಂದಿರದಲ್ಲಿ

ಸುರಿಸಿದಳು

ಸ್ವಾತಿಯ ಜಲಬಿಂದು

ಹೃದಯದಲಿ ಆಯಿತು

ಪ್ರೇಮದ ವಿನಿಮಯ

ಅನಿರ್ವಚನೀಯ ಅನುಭವ

ಅನ್ಯೋನ್ಯ ಪ್ರೇಮಾತಿಶಯ  

ಮಧುರವಾಗಿ ನಿನಾದಗೈಯುತ್ತಿದ್ದ

ಹೃದಯಗರ್ಭದೊಳಗಾಯಿತು

ಝರಿಗಳ ತಂಪು,

ಹಸಿರಿನ ಸೊಂಪು,

ಕುಸುಮಗಳ ಕಂಪುಗಳೊಡನೆ

ಪ್ರೀತಿಯ ಮುತ್ತಿನ ಅವತಾರ

ಪ್ರೇಮ ಸಾಕ್ಷಾತ್ಕಾರ

 

*****ಪ್ರಕಾಶ ತದಡಿಕರ್ ******