ಭಾವ ಸ್ಫುರಿಸುವ ಪ್ರೇಮ ಸ್ಪರ್ಶ

ಹೃನ್ಮನ ಸ್ಪಂದನ ಪರಾಗಸ್ಪರ್ಶ

 

ಒಲವ ವೀಣಾ ಮೀಟಿದ ತಾನ

ಹೂಮನಸ್ಸಿನ ಭಾವಪೂರ್ಣ ಗಾನ

 

ಸಮರಸದಾ  ಮಧುರಾಲಿಂಗನ

ಭಾವನಾತ್ಮಕ ಸ್ಪಂದನ

 

ಪ್ರೇಮೋತ್ಸವ ಸುಖದ ಸಂಭ್ರಮ

ಆರ್ದ್ರತೆ ಇಂಗದ ಪ್ರೇಮ ಸಮಾಗಮ

 

ಪ್ರೇಮೋನ್ಮಾದತೆ ಶೃಂಗಾರ ಭಾವ

ಸುಮಧುರ ಸುಂದರ ಸ್ವರಮಾಧುರ್ಯ

 

ರೋಮಾಂಚನ ಮಿಲನ ಮಧುರ

ಪ್ರಣಯ ರಾಗ ಸ್ವರ  ಶೃಂಗಾರ

 

ಹೃದಯ ಸಂವಹನ ಮೋಹಕ ರಾಗ

ಅತಿ ಮಧುರ ಈ ಅನುರಾಗ

 

***ಪ್ರಕಾಶ ತದಡಿಕರ್ ***