ಕೆಮ್ಮು ಬರುತ್ತಿತ್ತು ,ದಿನವಿಡೀ ಕೆಮ್ಮುತ್ತಿದ್ದೆ ಅಸ್ಪತ್ರೆಗೆ ಕರೆದೊಯ್ಯುವರು ಯಾರು ?? ಕಾಯುತ್ತಿದ್ದೆ ಇಂದು ಕೆಮ್ಮು ನಿಂತಿದೆ, ದೇಹ ತಣ್ಣಗಾಗಿದೆ ನಿಂತಿದ್ದಾರೆ ಎಲ್ಲರೂ ನನ್ನ ಮುಂದೆ ಅಂದು ಯಾರಿರಲಿಲ್ಲ ನನ್ನ ನಗಿಸಲು ನನ್ನ ದುಖ: ನೀಗಿಸಲು ಇಂದು ನಾನು ಶಾಂತವಾಗಿ ಮಲಗಿರಲು ಎಲ್ಲರೂ ಬಂದರು ಅಳಲು ಅಂದು ಉಪವಾಸ ಇದ್ದೆ ರಾತ್ರಿ ಎಲ್ಲ ಒಂದು ತುತ್ತು ನೀಡುವರು ಯಾರಿರಲಿಲ್ಲ ಇಂದು ಹಸಿವೆ ಸತ್ತಿದೆ ನನ್ನೆಲ್ಲ ಬಂದರು ಅಳಲು ಎಲ್ಲಿಂದೆಲ್ಲ ಮುದುಕನೆಂದು ತಿರಸ್ಕರಿಸಿದರೆಲ್ಲ ಬಂದರೀಗ ಕೈಮುಗಿಯಲು ಏಲ್ಲ ಬದುಕಿರುವಾಗ ಆಧಾರ ನೀಡದ ಇವರೆಲ್ಲ ಸತ್ತನಂತರ ಸ್ಮಾರಕ ಮಾಡುರಲ್ಲ ಅಂದು ನನ್ನ ದುಖ:ವ ತಿಳಿದರೇನು ಇಂದು ಈ ಅಳುವಿಗೆ ಬೆಲೆ ಏನು?? ನನ್ನ ಮಣ್ಣು ಮಾಡುವ ತನಕ ಅಳುವರಿವರಿನ್ನು ಆಸ್ತಿ ಲಪಟಾಯಿಸಲು ಬಂದವರಿವರು ನನಗರಿಯದೇನು?? ವೃದ್ಧಾಪ್ಯವೆಂಬುದು ಕಟ್ಟಿಟ ಬುತ್ತಿ ಇದು ಪ್ರಕೃತಿಯ ನಿಯಮ, ರೀತಿ ತಿಳಿದಿರಲಿ ಎಲ್ಲರಿಗೂ ಈ ನೀತಿ ಪ್ರೀತಿ ಆದರವಿರಲಿ ನಮ್ಮ ಪ್ರತಿ ***ಪ್ರಕಾಶ ತದಡಿಕರ್ ******
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!