“ತರಳೆಯೇನಿದು ಬೆವೆತೆ?” “ಕಣ್ಗಳೊ
ಳಿರುವ ಬೆಂಕಿಗೆ!” “ನಡುಕವೇ ಚಂ
ದಿರ ಮೊಗದವಳೆ?” “ ದಿಟದಲಂಜಿಕೆ ಕೊರಳ ಹಾವಿನಲಿ!”
“ಅರರೆ ಮೈಯಲಿ ಪುಳಕವೇನಿದು?”
“ಶಿರದ ಮೇಲಿನ ಗಂಗೆ ತುಂತುರು
ತರುವ ಚಳಿಗೆ”ನ್ನುತಲಿ ಗುಟ್ಟನು ಕಾಯ್ವವಳೆ ಕಾಯ್ಗೆ!
ಸಂಸ್ಕೃತ ಮೂಲ (ಸುಭಾಷಿತ ರತ್ನಕೋಶದಿಂದ) :
ಸ್ವೇದಸ್ತೇ ಕಥಮೀದೃಶಃ ಪ್ರಿಯತಮೇ ತ್ವನ್ನೇತ್ರವಹ್ನೇರ್ವಿಭೋ
ಕಸ್ಮಾದ್ವೇಪಿತಮೇತಾದಿಂದು ವದನೇ ಭೋಗೀಂದ್ರಭೀತೇರ್ಭವ ।
ರೋಮಾಂಚಃ ಕಥಮೇಶ ದೇವಿ ಭಗವನ್ ಗಂಗಾಂಭಸಾಂ ಶೀಕರೈಃ
ಇತ್ಥಂ ಭರ್ತಾರಿ ಭಾವಗೋಪನಪರಾ ಗೌರೀ ಚಿರಂ ಪಾತು ವಃ ॥
-ಹಂಸಾನಂದಿ
ಕೊ: ಇದು ಗೌರಿ-ಶಂಕರರ ನಡುವಿನ ಮಾತುಕತೆಯಂತೆ ಹೆಣೆದಿರುವ ಗೌರಿಯ ಸ್ತುತಿ ಅಂತ ಹೇಳಬೇಕಿಲ್ಲ ಅಂದುಕೊಂಡಿದ್ದೀನಿ
ಕೊ.ಕೊ: ಈ ಪದ್ಯವನ್ನ ಹಿಂದೆ ___LINK_OPEN_data-blogger-escaped-target="_blank" href="http://hamsanada.blogspot.com/2010/04/blog-post_28.html" rel="nofollow"___ಗೌರಿಯ ಗುಟ್ಟು ಅನ್ನುವ ಹೆಸರಿನಲ್ಲಿ ಅನುವಾದಿಸಿದ್ದೆ. ಆಗ ಯಾವುದೇ ಛಂದಸ್ಸಿಗೆ ಕಟ್ಟು ಬಿದ್ದಿರಲಿಲ್ಲ - ಈಗ ಈ ಪದ್ಯವನ್ನ ಭಾಮಿನೀ ಷಟ್ಪದಿಯಲ್ಲಿ ಬರೆದಿದ್ದು ___LINK_OPEN_data-blogger-escaped-target="_blank" href="http://padyapaana.com/?p=1676" rel="nofollow"___ಪದ್ಯಪಾನದಲ್ಲಿ ಕೇಳಿದ ಸಂಭಾಷಣೆಯ ಪದ್ಯವೊಂದನ್ನು ಬರೆಯಬೇಕೆಂಬ ಸವಾಲಿಗೆ. ಸಂಸ್ಕೃತ ಮೂಲ ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ.
ಕೊ.ಕೊ.ಕೊ: ಮೂಲದ ಪೂರ್ತಿ ಆಶಯವನ್ನು ನನ್ನ ಭಾಮಿನಿಯಲ್ಲಿ ಸೇರಿಸಲಾಗದ್ದು ನನ್ನ ಕೊರತೆಯಷ್ಟೇ!
ಚಿತ್ರ ಕೃಪೆ:___LINK_OPEN_data-blogger-escaped-target="_blank" href="http://www.exoticindiaart.com/paintings/" rel="nofollow"___ http://www.exoticindiaart.com/paintings/
ಪ್ರತಿಕ್ರಿಯೆ (1)