ಗಿಡದೊಳದಗಣ‌ ಗೂಡಿನಲ್ಲಿ

ಪ್ರೀತಿಯ‌ ಮರಿಗಳಿಗೆ

ಅಕ್ಕರೆಯ‌ ತುತ್ತನ್ನು

ನೀಡುವ‌ ತಾಯಿಹಕ್ಕಿಯ‌

ಮಮತೆಗೆ ಏನೆಂದು ಹೇಳಲಿ?

 

ತುತ್ತೊಂದನ್ನು ಕಂಡು

ಆತ್ಮೀಯ‌ ಬಳಗಕ್ಕೂ

ಭೋಜನವಾಗಲೆಂದು

ಕೂಗಿ ಕರೆವ‌ ಕರಿಕಾಗೆಯ‌

ಮಮತೆಗೆ ಏನೆಂದು ಹೇಳಲಿ?

 

ತಾಯಗರ್ಭದಿಂದ‌

ಧರೆಗೆ ಉರುಳುವ‌

ಹೊಸದೊಂದು ಕುಡಿಗೆ ಅಂದೆಯೇ

ನಡಿಗೆ ಕಲಿಸುವ‌ ಆನೆಯ‌

ಮಮತೆಗೆ ಏನೆಂದು ಹೇಳಲಿ?

 

ಒಡಲನ್ನು ಬಗೆಬಗೆದರೂ

ಖನಿಜ‌,ನೀರನ್ನು ನೀಡುವ‌,

ಪಾದದಿಂದ‌ ತುಳಿದವರ‌

ಹಸಿವ‌ ಹಿಂಗಿಸುವ‌ ವಸುಂಧರೆಯ‌

ಮಮತೆಗೆ ಏನೆಂದು ಹೇಳಲಿ?

 

ಆರೂ ಗುಣಗಳಿಂದ‌

ಅವಗುಣನಾದವನಲ್ಲಿಯೂ

ಜ್ಞಾನ‌,ಭಕ್ತಿ,ವೈರಾಗ್ಯಗಳ‌

ಬೆಳಕನ್ನು ತೋರಿಸುವ‌ ಗುರುವಿನ‌

ಮಮತೆಗೆ ಏನೆಂದು ಹೇಳಲಿ?

 

ಅಲ್ಪಜ್ಞಾನಿಯಾದವನ‌ ಮನದಲ್ಲಿ

ಕಾವ್ಯದಾ ಬೀಜ‌ ಹುದುಗಿಸಿ

ಕವಿತೆಯೆಂಬೋ ಸಸಿಯ‌ ಸೃಷ್ಟಿಸುವ‌

ತಾಯಿ ಭುವನೇಶ್ವರಿಯ‌

ಮಮತೆಗೆ ಏನೆಂದು ಹೇಳಲಿ?