1) ವಾಸ್ತುವಿಗಿಂತ

    ವಾಸ್ತವತೆ ಅರಿಯುವುದು

    ಮೇಲು,

    ನಮಗೆ ದುಃಖವಾದರೂ ಸರಿ

    ಅನ್ಯರ ನೆಮ್ಮದಿ ಹಾಳಾಗಬಾರದು.

2) ವಸ್ತುವಿನಲ್ಲಿ

    ವಾಸ್ತು ಇಲ್ಲ,

    ನಮ್ಮ ಗುಣಗಳಲ್ಲಿ

    ಒಳ್ಳೆಯ ಗುಣಗಳೆಂಬ

    ವಾಸ್ತು ಅಳವಡಿಸಬೇಕು,

    ವಾಸ್ತುವಿನಿಂದ

    ವಸ್ತುಗಳ ಬದಲಿಸ ಹೋಗಿ

    ಅನ್ಯರ ಖಿನ್ನತೆಗೆ 

    ಕಾರಣವಾದರೆ,

    ಆ ವಾಸ್ತುಪುರುಷ

    ನಮಗೆ "ಅಸ್ತು" ಎನ್ನುವನೇ?

3) ಅನ್ಯರ ಹೆಣವಾಗಿಸಿ

    ಅವುಗಳ ಮೇಲೊಂದು

    ಸೌಧ ಕಟ್ಟಿದೆ ಎಂದು

    ಬೀಗುವ ಮಾನವನಿಗೆ

    ಗೊತ್ತಾಗುವುದೇ ಇಲ್ಲ!

    ಅವನು ಕಟ್ಟಿದ್ದೊಂದು

    ಗೋರಿ ಎಂದು!!

    ಅವನ ಬರುವಿಕೆಯನ್ನು

    ಕಾಯುತ್ತ ಕುಳಿತಿರುತ್ತವೆ

    ಒಳಗಣ ದೆವ್ವಗಳು!!!