1)ನನ್ನ ಹಾಡು ನಿನ್ನದು,

ನಿನ್ನ ಮೌನ ನನ್ನದು,

ನನ್ನ ನಗುವು ನಿನ್ನದು,

ನಿನ್ನ ಚಿಂತೆ ನನ್ನದು,

ನನ್ನ ಮೌನ ನನ್ನ ಚಿಂತೆ,

ನಿನ್ನ ಹಾಡಿಗೆ,

ನನ್ನ ನಗುವ ಸಂತೆ.

2)ನನ್ನ ಸಮಯ ಬದಲಿಸಲು

ಕಿಂಚಿತ್ ಸಮಯ ಬೇಕಿಲ್ಲ ನಿನಗೆ,

ಆದರೂ,

ಏಕಿಷ್ಟು ಕ್ರೂರ ನಿಲುವು

ನನ್ನ ಮೇಲೆ

ಓ ಸಮಯವೇ.