ಬಡವನೆಂದು ನಾನೇಕೆ ಅಂದುಕೊಳ್ಳಲಿ

ನಿನ್ನ‌ ನಾಮದ‌ ಆಭರಣ‌ ಎನ್ನಲ್ಲಿರಲು

ಪರದೇಸಿಯೆಂದು ನಾನೇಕೆ ತಿಳಿಯಲಿ

ನಿನ್ನ‌ ಕರುಣೆಯಡಿ ಬೆಳೆಯುತ್ತಿರಲು

 

ಹಸಿವಿನಿಂದ‌ ನಾನೇಕೆ ಬಳಲಲಿ

ನಿನ್ನ‌ ನಾಮದ‌ ಹೋಳಿಗೆ ಎದುರಿರಲು

ಶ್ರೀಮಂತನು ನಾನು

ಪರದೇಸಿಯಂತೂ ಅಲ್ಲವೇ ಅಲ್ಲ

 

ಹೊಟ್ಟೆ ತುಂಬಿದ‌ ಸಂತೃಪ್ತನು ನಾನು

ನಿನ್ನ‌ ನಾಮ‌ ಬಲದ‌ ಮಹಿಮೆಯೇ

ಅಂತಹುದು ನೋಡಾ ಪ್ರಹ್ಲಾದಪ್ರಿಯ‌.