ನೋಟ
ನಾವು ನೋಡುವ ನೋಟ
ಚೆನ್ನಾಗಿರಬೇಕೆಂದರೆ
ಮೊದಲಿಗೆ ಎದುರಿದ್ದದ್ದೂ
ಚೆನ್ನಾಗಿರಬೇಕು
ಕನಸು
ಕಣ್ಣು ಮುಚ್ಚಿದಾಗಿನ ಸ್ಥಿತಿಯಲ್ಲಿನ
ಭಾವನೆಗಳು ಕನಸಾದರೆ
ಅನುಭವಿಸಲು ಚೆನ್ನ
ಕನಸುಗಳನ್ನೇ ಬೆಂಬತ್ತಿ ಹೋಗದಿರುವುದು
ಇನ್ನೂ ಚೆನ್ನ
ನೋವು-ಸಾವು
ನನ್ನವರ ಸಾವಿನ ನೋವಿನಿಂದ
ಹೊರಬರುವುದು ಕಷ್ಟ
ನನ್ನ ಸಾವಿನ ಯೋಚನೆ
ಇನ್ನೂ ಕಷ್ಟ
ನೋವಿನಿಂದ ಕೂಡಿದ ಬದುಕಿಗಿಂತ
ಸಾವು......ಅಲ್ಲ ಅನಿಷ್ಟ
ಬಾಡಿದ ಹೂವು
ಬಾಡಿದ ಹೂವಿನ
ಪಕಳೆಗಳ ಉದುರುವಿಕೆಗೆ
ಯಾರಲ್ಲಿಯೂ ಇಲ್ಲ ಉತ್ತರ,
ಸಾಧನೆಯಿಂದ ಬಾಡಿತೇ?
ವ್ಯರ್ಥವಾಗಿ ಬಾಡಿತೇ?
ಸಾಧನೆಯಿಂದಾಗಿದ್ದರೆ
ಧನ್ಯತೆ ಎಂದೂ ಬಾಡದು
ವ್ಯರ್ಥದಿಂದಾಗಿದ್ದರೆ
ನಗುವೂ ಬಾಡುವುದು