ಚಂದದ ಬದುಕನು ಸಾರ್ಥಕಗೊಳಿಸಲು
ಜನ್ಮಪಡೆ ನೀನೊಮ್ಮೆ ಕನ್ನಡ ನಾಡಲ್ಲಿ
ನೀನಾಡುವ ಮಾತನು ಮುತ್ತಾಗಿಸಲು
ಮಾತನಾಡು ಸದಾ ನೀ ಕನ್ನಡದಲ್ಲಿ
ನಮಿಸೋಣ ಶಿರಬಾಗಿ ಭುವನೇಶ್ವರಿಗೆ
ಹೋರಾಡೋಣ ಪಾವಿತ್ರ್ಯ ಕಾಪಾಡಲಿಕ್ಕೆ
ಜನನಿಯ ಮೇಲೆ ನಿನಗೆಷ್ಟಿದೆಯೋ ಪ್ರೀತಿ
ಇರಲಿ ಅಷ್ಟೇ ಜನ್ಮಭೂಮಿ,ಮಾತೃಭಾಷೆಯ ಪ್ರತಿ
ಕನ್ನಡ ನಾಡಲ್ಲಿ ಹುಟ್ಟಿದ್ದೇ ಸತ್ಯ
ಎಂದು ತಿಳಿ ನೀ ಸ್ವಾಭಿಮಾನಿ
ಕನ್ನಡ ಭಾಷೆಯೇ ಉಲಿಯಲಿ ನಿತ್ಯ
ನಮ್ಮಯ ಬಾಯಲಿ ಹೇ ಅಭಿಮಾನಿ
ಗಂಧದ ಕಂಪನು ಎಲ್ಲೆಡೆ ಹರಡಿಸು
ಕನ್ನಡ ಕಸ್ತೂರಿಯ ಎಲ್ಲೆ ಮೀರಿ ಪಸರಿಸು
ಎಂದಿಗೂ ಶಾಂತಿಯೇ ನಮ್ಮಯ ಮಂತ್ರ
ಬದುಕುವ ನಮ್ಮ ನೆಲವೇ ಸ್ವತಂತ್ರ
ಕೋಟಿ ಬಾರಿ ಮರುಜನ್ಮ ಪಡೆಯಲು
ಬ್ರಹ್ಮದೇವ ಆದರೆ ಕರುಣಾಕರ
ಕನ್ನಡಿಗನೆಂದೇ ಕರುನಾಡಲ್ಲಿ ಹುಟ್ಟಿಸಲಿ
ಬದುಕುವೆ ಕನ್ನಡ ಸೇವೆಯಲ್ಲಿ ನಿರಂತರ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!