1:ಕಾರ್ಯ‌

ಒಂದು ಕಾರ್ಯ‌ ನಿರ್ವಹಿಸುವ‌

ಮೊದಲು ನಾನಾಗುವೆ

ವಿಚಾರಗಳಲ್ಲಿ ಮಗ್ನ‌,

ಸರಿ ಎಂದು ಗೊತ್ತಾದರೆ

ಆಗುವೆ ನಿರ್ಧಾರದೊಡನೆ ಲಗ್ನ‌.

2:ಆನಂದ‌

ಬಂಜೆಯೊಬ್ಬಳಿಗೆ ಬಸಿರ‌ ಹೊತ್ತು

ಮಗುವ‌ ಪಡೆವ‌

ಕಲ್ಪನೆಯೊಂದು ಆನಂದವಾದರೆ,

ವಾಸ್ತವದಲ್ಲಿ

ಅನುರಾಗದಿಂದ‌ ತಬ್ಬುವ‌

ಗಂಡನ‌ ಅಕ್ಕರೆ.....

ಮಮತೆಯಿಂದ‌ ತಲೆ ಸವರುವ‌

ಅತ್ತೆಯ‌ ಪ್ರೀತಿ......

ಇವುಗಳೇ ಮಹದಾನಂದ‌.

3:ಸಂಪಾದಕ‌

ಎಷ್ಟು ಕವನಗಳ‌

ಕಳುಹಿಸಿದರೂ

ಪ್ರಕಟಿಸದೇ

ಮರಳಿಸುತ್ತಿದ್ದ‌

ಸಂಪಾದಕ‌,

ಬೇಸತ್ತ‌ ಕವಿ

ಕೊನೆಗೊಂದು ಪತ್ರ‌ ಬರೆದ‌,

"ಒಂದನ್ನಾದರೂ ಪ್ರಕಟಿಸೋ

ಬೀಳುವೆ ನಿನ್ನ‌ ಪಾದಕ್ಕ‌".