ಕವಿತೆಯಾಗಿ ಕಳೆದು ಹೋದ
ಕಣ್ಣೀರ ಹನಿಗೂ,
ಕೈಯಾರೆ ಕೆಡವಿ ಉರುಳಿಸಿದ
ಪ್ರೀತಿಯ ಮಹಲಿಗೂ,
ಮತ್ತದೇ ನಿನ್ನ ನೆನಪು....
ಕಡಲ ದ೦ಡೆಯಲಿ ಜೊತೆಯಾಗಿ
ಕಟ್ಟಿದ್ದ ಕನಸಿಗೂ,
ಮರಗಳೆದೆಯಲಿ ನವಿರಾಗಿ
ಕೆತ್ತಿದ್ದ ಹೆಸರಿಗೂ,
ಮತ್ತದೇ ನಿನ್ನ ನೆನಪು....
ಜೀವನ ಪೂರ್ತಿ ಜೊತೆಯಾಗಿ
ಇರಲಾಗದ ಅಸಹಾಯಕತೆಗೆ,
ಬಾಳ ಪಯಣದ ಕೊನೆಯ
ಸಾಲು ಬರೆಯುವಾಗಲೂ ಕಾಡುತ್ತಿದೆ
ಮತ್ತದೇ ನಿನ್ನ ನೆನಪು....
ಬದುಕಿನಿ೦ದಾಚೆ ಹೆಜ್ಜೆ
ಇಡುತ್ತಿರುವ ಈ ಕ್ಷಣದಲ್ಲೂ
ಉಸಿರಾಟವೇ ಸವಾಲಾಗುತ್ತಿರುವ
ಹೊತ್ತಿನಲ್ಲೂ ಕಾಡುತ್ತಿದೆ
ಮತ್ತದೇ ನಿನ್ನ ನೆನಪು...!!!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!