ಸೋಲದಿರಲಿ ಈ ಕ್ಷಣ ಈ ಮನ
ಹೃದಯ ಹದ ತಪ್ಪದಿರಲಿ...
ಮನಸಿಗೇನ0ತ ತಿಳಿ ಹೇಳಲಿ
ಒಲಿಯದಿರಲಿ ಮನ ಇವನಿಗೆ....
ನೋವು ನಲಿವುಗಳಿಗೆಲ್ಲ ಇವನ
ಸಾಮಿಪ್ಯ ಬೇಕಿದೆ....
ನನ್ನೆಲ್ಲ ಪ್ರಶ್ನೆಗಳೂ ಇವನಲ್ಲಿ
ಉತ್ತರವ ಬೇಡಿದೆ....
ಇವನ ನೋಡಲು ಕಣ್ ಗಳು
ದಿನವೆಲ್ಲ ಹುಡುಕಾಟ ನೆಡೆಸಿದೆ...
ಅರಿವಿಗೇ ಬರದ0ತೆ ಮನ ಇವನಿಗಾಗಿ
ಹಟ ಹಿಡಿದು ಕೂತಿದೆ....
ಇಲ್ಲ....
ನಾನೆ0ದೂ ಇವನಿಗೆ ಸೋಲರಾರೆ..
ಅ0ತ್ಯ ಗೊತ್ತಿದ್ದೂ ಆರ0ಭಿಸಲಾರೆ..
ನನಗೇ ನಾನು ಮೋಸ ಮಾಡಲಾರೆ..
ಮುಗಿಯುವ ಅಧ್ಯಾಯಕ್ಕೆ ಮುನ್ನುಡಿಯಾಗಲಾರೆ...!!!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!