ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ
ಕೂಡಲೆಯೆ ಮುಚ್ಚಿಕೊಂಡೆ
ಅರಳಿದ ಕದಂಬಹೂವಂತೆ ಮೈ ನವಿರೇಳೆ
ಹೇಳೆ ಹೇಗದ ಮುಚ್ಚಲೆ?
ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14):
ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ್ತಾಭ್ಯಾಂ ತಸ್ಮಿನ್ದೃಷ್ಟೇ
ಅಂಗಂ ಕದಂಬಕುಸುಮಮಿವ ಪುಲಕಿತಂ ಕಥಂ ನು ಚ್ಢಾದಯಿಷ್ಯಾಮಿ
ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಯಿ - 4-14)
ಅಚ್ಛೀಇ ತಾ ಥಡಸ್ಸಂ ದೋಹಿ ವಿ ಹತ್ಥೋಇ ವಿ ತಸ್ಸಿಂ ದಿಟ್ಠೇ
ಅಂಗಂ ಕಲಂಬಕುಸುಮಂ ವ ಪುಲಇಅಂ ಕಹ ಣು ಢಕ್ಕಿಸ್ಸಂ || 4-14||
-ಹಂಸಾನಂದಿ
ಕೊ: ಈ ಪದ್ಯದ ನಾಯಿಕೆ ತನ್ನ ಪ್ರಿಯಕರನೊಂದಿಗೆ ಮುನಿಸು ಹೊಂದಿರುವ 'ಖಂಡಿತೆ'. ತನ್ನ ಪ್ರಿಯಕರನ ಜೊತೆ ಮುನಿಸುಗೊಂಡಿರುವವಳು. ಅವನು ಕಂಡರೆ ಅವನನ್ನು ನೋಡಲೂಬಾರದೆಂದು ಕಣ್ಣುಮುಚ್ಚಿಕೊಳ್ಳುವವಳು - ಆದರೆ ಅವಳ ಕೈ, ಕಣ್ಣುಗಳಂತೆ ಮನಸ್ಸನ್ನು ಕಟ್ಟಿಹಾಕಲು ಅವಳಿಂದ ಅಸಾಧ್ಯವೆನ್ನುವುದು ಪದ್ಯದ ಭಾವ.
ಕೊ.ಕೊ: ಚಿತ್ರದಲ್ಲಿರುವುದು ಕದಂಬ ಹೂವು ( Neolamarckia cadamba). ಕರ್ನಾಟಕದ ಪ್ರಸಿದ್ಧ ರಾಜಮನೆತನ 'ಕದಂಬ' ರಿಗೆ ಹೆಸರು ಬಂದಿರುವುದೂ ಈ ಮರದಿಂದಲೇ ಅಂತೆ. ಕೆಲವರು ಕದಂಬ ಮರವೆಂದರೆ ಈಚಲಮರ ಎನ್ನುವುದೂ ಉಂಟು.
ಕೊ.ಕೊ.ಕೊ: ಹಾಲನ ಗಾಹಾ ಸತ್ತಯಯಿ ನಂತರ ಬಂದ ಅಮರುಕನ ಮೇಲೆ ಪ್ರಭಾವ ಬೀರಿದೆ ಎನ್ನುವು ಅಭಿಪ್ರಾಯವಿದೆ. ಉದಾಹರಣೆಗೆ ಈ ಪದ್ಯವನ್ನೇ ಹೋಲುವ___LINK_OPEN_href="http://hamsanada.blogspot.ca/2012/05/blog-post_29.html"___ ಹಮ್ಮು ತೊರೆದವಳು - ಈ ಅನುವಾದವನ್ನು ನೋಡಿ.
ಚಿತ್ರಕೃಪೆ: ವಿಕಿಪೀಡಿಯಾ
ಪ್ರತಿಕ್ರಿಯೆ (3)
ಸಂಸ್ಕೃತದೊಂದಿಗೆ ಪ್ರಾಕೃತ ಮೂಲ ಕವನವೂ ಬರೆಯುತ್ತಿರುವುದಕ್ಕೆ ಧನ್ಯವಾದಗಳು. ಸ್ವಲ್ಪ ಸ್ವಲ್ಪವಾದರೂ ಪ್ರಾಕೃತ ಭಾಷೆಯ ಬಗ್ಗೆ ಗೊತ್ತಾಗುವುದು.