~~

ಎಷ್ಟೋ ಬಾರಿ ನಗುವಳು

 ಕೊನೆಯಿಲ್ಲದಂತೆ ಮಾತಾಡುವಳು

 ಏನೇನೋ ಗುನಗುನಿಸುವಳು

 ಕಾರಣ ಇಲ್ಲದೆ ಕೋಪಿಸಿಕೊಂಡವಳು

 ಒಮ್ಮೆ ತುಸು ದೂರ

 ಮತ್ತೊಮ್ಮೆ ಮತ್ತಷ್ಟು ಹತ್ತಿರ

ಸದಾ ನನ್ನವಳು ಎನ್ನುವಷ್ಟು ಸಲುಗೆ

 ಇಂದೂ ಆವರಿಸಿರುವ

 ಅದೇ 'ಮೌನ'

ಸುಮ್ಮನಿದ್ದಾಳೆ, ಏನೂ ಮಾಡುತ್ತಿಲ್ಲ

 ಮತ್ತೆ ಅನಾಯಾಸವಾಗಿ

 ಅವಳನ್ನೇ ಹುಡುಕುತ್ತಿದ್ದೇನೆ ...

"....." & "....." ?

ಕನ್ನಡಿಗ ವಿಜಯ್ ಹೆಮ್ಮರಗಾಲ