ಪ್ರೀತಿಯ ಕಡಲಲಿ ತೇಲುವರಾರೋ..

ಸ್ನೇಹದ ದೋಣಿಯ ನಾವಿಕನಾರೋ..

 

ಪ್ರಣಯದ ಪಯಣದಿ ನೀನಿರೆ ಜೊತೆಯಲಿ..

ಕನಸಿಗೂ ಹಾಕುವೆ ತಡೆ ಬೇಲಿ..

 

ಬಿಸಿ ರಕ್ತದ ವಯಸ್ಸು..

ಲಗಾಮು ಇಲ್ಲದ ನನ್ನ ಮನಸ್ಸು..

ಕಾಣೋದು ಬರೀ ನಿನ್ನದೇ ಹಗಲುಗನಸು..

 

ಮರೆವು ಹಿತ‌..

ಆದರೆ ನಿನ್ನ ಮರೆತು ಬಾಳೋಕೆ ಆಗುತ್ತಾ?

 

ಮನದ ರತಿ ಕೇಳೆ ಒಮ್ಮೆ..

ಕೊಡುವೆ ಸುಪಾರಿ ಕೊಂದು ಬಿಡು ನನ್ನೊಮ್ಮೆ..

 

ನೆನಪೊಂದು ಗಾಯ‌..

ನೆನಪೊಂದು ಮಾಯೆ..

ನೆನಪೊಂದು ಸುಳ್ಳು..

ನೆನಪೊಂದು ನೆಪ‌..

ನಿನ್ನ ನೆನಪು ಶಾಶ್ವತ‌!