ಕರಿನೆರಳು ಕಾಡುವುದೆನ್ನ ದೈತ್ಯವಾಗುವಂತೆ
ಅಡಗಿಸಿಡು ಎನ್ನ ಯಾವ ಭಯವಿಲ್ಲದಂತೆ
ಅಮ್ಮ ನಿನ್ನ ಮಡಿಲ ಬಿಟ್ಟು ಬೇರೆಲ್ಲೊ ಹೋಗದಂತೆ
ಹೆಜ್ಜೆ ಸಪ್ಪಳ ಎನ್ನ ಎದೆ ನಡುಗಿಸುವಂತೆ
ಕಾಮದ ಕಣ್ಣೂಗಳು ಎನ್ನ ಹಿಂಬಾಳಿಸುವಂತೆ
ಪ್ರಕೃತಿಯಂದ ಸವಿಯುತ್ತ ನಾ ನಡೆದಾಗ
ಯಾರೋ ಅಡ್ಡ ಗಟ್ಟಿದಂತೆ,
ಮರೆಯಲ್ಲಿ ನಿಂತು ಯಾರೊ ಎನ್ನ ಎಳೆದಂತೆ
ಎಲ್ಲಿ ಯಾರ ಕೈಗೆ ಸಿಕ್ಕಿ ಬೀಳುವೆನೆಂಬ ಭಯ
ಯಾರ ತುಳಿತಕ್ಕೆ ಒಳಗಾಗುವೆಂಬ ಭಯ
ಯಾರ ಕಾಮುಕಕ್ಕೆ ಛಿದ್ರವಾಗುವೆನೆಂಬ ಭಯ
ಅಮ್ಮ ಯಾಕಮ್ಮ ಹೆಣ್ಣಾಗಿ ಈ ಲೋಕಕ್ಕೆ ಕಳುಹಿಸಿದೆ
ಗುಮ್ಮನಂತೆ ಕಾಡುವುದು ಎನಗೆ ಭಯದ ನೆರಳು
ಅಮ್ಮ ಗುಬ್ಬಚ್ಚಿಯಂತೆ ನಿನ್ನೆದಯಲ್ಲಿ ಬಚ್ಚಿಡು
ನಿನ್ನ ಗರ್ಭದಲ್ಲಾದರು ಸರಿ,ಯಾರ ಕಣ್ಣು ಎನ್ನ ಮೇಲೆ ಬೀಳದಂತೆ
ಈ ಪ್ರಪಂಚ ೆನಗೆ ಬೇಡವಮ್ಮ
ಹೆಣ್ಣಿನ ಬಾಳು ಗೋಳು, ನರಕ ಯಾತನೆ
ನೀನು ಸಹಿಸಿರುವೆ ಎಲ್ಲಾ ನೋವು
ನಾ ಸಹಿಸಲಾರೆ ಕೆಟ್ಟ ಕಣ್ಣುಗಳ
ಅಡಗಿಸಿಡಮ್ಮ ಎನ್ನ ಕಾಮುಕರ ಕಣ್ಣಿನಿಂದ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!