ಕನ್ನಡದ ತನುವೆನದಾಗಲಿ ಕನ್ನಡದ ಮನವೆನದಾಗಲಿ 

ಕನ್ನಡದಿ ನಿತ್ಯವೂ ಮಿಂದೇಳುವ ಭಾಗ್ಯವೆನಗಿರಲಿ   

ಕನ್ನಡವು ನನ್ನೀ ಜೀವಕೆಂದೆಂದೂ ಉಸಿರಾಗಿರಲಿ

ಕನ್ನಡತನ ನನ್ನೀ ನಾಡಿಮಿಡಿತದಲಿ ಮೇಳೈಸಿರಲಿ     

ನಾನೆಲ್ಲಿದ್ದರೂ ನಾನೆಂತಿದ್ದರೂ ಕನ್ನಡದ ಸೊಗಡಿರಲಿ  

ಅಕ್ಕಡ-ಇಕ್ಕಡಗಳ ಮಧ್ಯೆ ನನ್ಕನ್ನಡವು ಮಾಸದಿರಲಿ

ಎನ್ನಡ-ಸೊಲ್ಲಡಗಳ ನಡುವೆ ನನ್ಕನ್ನಡವು ನಲುಗದಿರಲಿ   

ನನ್ನಯ ಮಾತು-ಕೃತಿಗಳಲಿ ಕನ್ನಡದಾ ಸೊಬಗಿರಲಿ 

                                               

ಕನ್ನಡದ ದೀಪವನು ಹಚ್ಚುವ ಸದವಕಾಶವೆನಗಿರಲಿ  

ಕನ್ನಡಾಂಬೆಯ ಹಿರಿಮೆ ಹೆಚ್ಚಿಸುವ ಪುಣ್ಯವೆನದಾಗಲಿ        

ಕನ್ನಡದಾ ಸದ್ಗೆಲ್ಗೆಯಲಿ ಕನ್ನಡದಾ ಸದ್ಬಾಳ್ಗೆಯಲಿ                                                                                                                                                                    

ಅಳಿಲ ಸೇವೆಯೆನಿಸಿದರೂ ನನದಾದ ಪಾಲಿರಲಿ

© ರಾಘವ ಹರಿವಾಣಂ