ಕನ್ನಡದಲ್ಲಿ ಸತ್ವವಿದೆ

ಕನ್ನಡದಲ್ಲಿ ಸತುವಿದೆ

ಕನ್ನಡದಲ್ಲಿ ಸತ್ಯವಿದೆ

ಕನ್ನಡದಲ್ಲಿ ಸೌಜನ್ಯವಿದೆ

ಕನ್ನಡದಲ್ಲಿ ಸರಿಗಮವಿದೆ

ಕನ್ನಡದಲ್ಲಿ ಸಂತಸವಿದೆ

ಕನ್ನಡದಲ್ಲಿ ಸಂಗೀತಸುಧೆಯಿದೆ

ಕನ್ನಡದಲ್ಲಿ ಸಾವಿರವರ್ಷದಿತಿಹಾಸವಿದೆ.

ಕನ್ನಡದಲ್ಲಿ ಸಲುಗೆಯಿದೆ.

ಕನ್ನಡದಲ್ಲಿ ಸಹನಶೀಲತೆಯಿದೆ.

ಕನ್ನಡದಲ್ಲಿ ಸಹಬಾಳ್ವೆಯಿದೆ.

ಇಂತಿಪ್ಪ ನನ್ನ ಪ್ರೀತಿಯ ಕನ್ನಡಭಾಷೆ !

-ವಿಶ್ವನಾಥ್ ಬಿ.ಎಮ್.