ನನ್ನ ಅಪ್ಪನಿಗೆ ಅರವತ್ತು

ಇರುವರು ಬಾಲ್ಯದ ಗೆಳೆಯರು ಬಹಳಷ್ಟು

ನನ್ನ ಅಮ್ಮನಿಗೂ ಅರವತ್ತು

ಆದರೆ ಎಲ್ಲಿ ನನ್ನ ಅಮ್ಮನಾ ಗೆಳೆಯರು

 

ಗಿಲ್ಲಿ-ದಾಂಡು, ಚೌಕಾ ಬಾರ, ಕುಂಟೆ ಬಿಲ್ಲೆ

ಎಲವು ಗೊತ್ತು ನನ್ನ ಅಮ್ಮನಿಗೆ

ಜೊತೆಗೆ ಆಡಿದ ಗೆಳೆಯರು

ಹೆಸರು ಮಾತ್ರ ಗೊತ್ತಿಲ

ಎಲ್ಲಿ ನನ್ನ ಅಮ್ಮನಾ ಗೆಳೆಯರು

 

ಮರೆಯದೆ ಹೇಳುವಲು ಬಾಲ್ಯದಲಿ

ನೊಡಿದ ಜಾತ್ರೆಯನು, ಸಂಭ್ರಮದಿ

ಆಚರಿಸಿದ ಹಬ್ಬಗಳನ್ನು

ಆದರಲ್ಲಿ ಇಲ್ಲ ನನ್ನ ಅಮ್ಮನ ಗೆಳೆಯರು

 

ಊರಿನಿಂದ ಊರಿಗೆ

ಮನೆಯಿಂದ ಮನೆಗೆ

ಬಂದವಳು ನನ್ನ್ ಅಮ್ಮ

ಆದರೆ ಬೆಳೆಯಲಿಲ ನನ್ನ

ಅಮ್ಮನ ಗೆಳೆಯರ ಬಳಗ

 

ನಾಲಕ್ಕು ಗೊಡೆ, ಗಂಡ, ಮಕ್ಕಳು

ಅವರ ನೆಂಟರು-ಬಂಧು-ಬಳಗ

ಇದೇ ನನ್ನ ಅಮ್ಮನ ಪ್ರಪಂಚ

ಇಲ್ಲಿ ಇಲ್ಲ ನನ್ನ ಅಮ್ಮನ ಗೆಳೆಯರು

 

                                 ನಿರ್ಮಲ ಎಮ್ ಎನ್