ಎರಡು ಹಳಿಗಳ ಮೇಲೆಯೇ ಸಾಗುವ ನಿನ್ನ ಜೀವನವು,
ಕೊನೆಯಾಗುವುದು ಅಲ್ಲಿಯೇ ಒಂದು ದಿನವು.
ಹುಟ್ಟಿನಿಂದಲೇ ಆರಂಭವಾಗುವ ನಿನ್ನ ಸೇವೆಯು,
ಸಾವಿನಲ್ಲಿಯೇ ಕೊನೆಗೊಳ್ಳುವುದು ಒಂದು ದಿನವು.
ನಿನಗಿಲ್ಲ ಹಗಲು, ರಾತ್ರಿಗಳು,
ಹಬ್ಬ, ಹರಿದಿನಗಳು,
ವಾರದ ರಜೆಗಳು,
ನಿನ್ನ ಸೇವೆಯು ನಿರಂತರ.
ಅರೀ ದಿನವೂ ಲಕ್ಷಾಂತರ ಕನಸುಗಳನ್ನು ಹೊತ್ತೊಯುವನ್ನು ನೀನು,
ಕೋಟ್ಯಾಂತರ ಜನರಿಗೆ ಅನ್ನದಾತನು ನೀನು,
ನಿನ್ನನ್ನು ನಂಬಿಕೊಂಡು ಬಾಳುತ್ತಿರುವರು ಭರತ ನಾಡಿನ ಜನರು.
ನದಿ, ವನ, ಗಿರಿ, ಶಿಖರಗಳೆಲ್ಲವು,
ನಿನ್ನ ಸೇವೆಯನ್ನು ಕಂಡು,
ನಿನಗೆ ಶರಣಾದವು.
ನಿನ್ನಲಿಲ್ಲ ಜಾತಿ, ಮತಗಳ ಭೇದಭಾವ,
ಬಡವ ಸಿರಿವಂತವೆಂಬ ಮೇಲು ಕೀಳರಿಮೆ ಭೇದಭಾವ,
ನಿನ್ನ ಮಡಿಲಲ್ಲಿ ಎಲ್ಲರೂ ಒಂದೇ.
ನಿನ್ನ ಅಂಗಳದಲ್ಲಿ ದಿನಾಲು ಅರಳುವವು,
ಸಾವಿರಾರು ಸಂಬಂಧಗಳು, ನಲಿವುಗಳು,
ಹಾಗಿಯೇ ಬಾಡುವವು ಹಲುವಾರು ಜೀವಗಳು.
ಮಾನವನ ಬಾಳಿನ ಬಂಡಿಯು,
ಸಾಗಲು ನಿನ್ನಾದೆ ಆಸರೆ,
ಬೆಂಕಿಯಲ್ಲಿ ನೀ ಬೆಂದು,
ತಂಪಾದ ಗಾಳಿಯು ನೀ ನೀಡುವೆ.
ಭರತ ನಾಡಿನ ಹೆಮ್ಮೆಯು ನೀನು,
ನಿನ್ನ ಸೇವೆಗೆ ನನ್ನದೊಂದು ಕಿರು ನಮನ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!