ದಾರಿಗುಂಟ ಒಬ್ಬ ತನ್ನಷ್ಟಕ್ಕೆ

ತಾನು ಮಾತನಾಡಿಕೊತಾ ನಡೆಯುತ್ತಿದ್ದ

ಮಾಗಿದ ವಯಸ್ಸು ಬಾಗಿದ ಬೆನ್ನು

ತಲೆ ಕೂದಲಿಗೆ ಎಣ್ಣೆಯಿಲ್ಲ

ಬಾಯಿಗೆ ಬೆಣ್ಣೆಯಿಲ್ಲ

ಬದುಕಿನ ಹಾದಿಗುಂಟ ನಡೆದ

ಹೆಜ್ಜೆಗಳ ಗುರುತಿಲ್ಲ

ಕಾಲದ ಅರಿವಿಲ್ಲ

ಹಸಿವು ನಿದ್ರೆಗಳಿಲ್ಲ

ಮಾತು ಮರೆತು ಮೌನ ಬೆರೆತು

ನಾನೂ ನನ್ನೊಡೆನೆ

ಮಾತನಾಡುತಾ ಮೌನ ತಾಳಿದೆ !

ಶಾಂತಿ ಮಂತ್ರವ ಜಪಿಸುತಾ.....

 

ಡಾ.ನಾಗೇಂದ್ರ ಮಲ್ಲಾಡಿಹಳ್ಳಿ