ಭೋರ್ಗರೆವ ಕಡಲತೆರೆ

ಯಾರ್ಭಟಕೆ ಕಾರಣವ

ನಾ ಬಲ್ಲೆ..

ಮೇಲಿಲ್ಲವೇ ನಗುನಗುತ

ಮಂದಹಾಸದಿ ಚಂದ್ರಮ..

ಕಾನನದಿ ನಗುನಗುತ

ತೂಗಾಡುತಿಹ ಓ ಸುಮವೇ

ಕಾರಣವ ನಾಬಲ್ಲೆ.. ನಿನ್ನೀ ಸಂಭ್ರಮಕೆ..

ಝೇಂಕರಿಸಿ ಹೂಂಕರಿಸಿ ತಬ್ಬಿ ಮುತ್ತಿಕ್ಕಲೆನೆ

ಅದೋ ಬರುತಿಲ್ಲವೇ ಭ್ರಮರ..

ಆದರೆ..??

ಹುಣ್ಣಿಮೆಯ ತಂಪಿನಲು

ಸೊಂಪಾದ ಗಾಳಿಯಲು

ಮಾಮರದ ಕೋಗಿಲೆಯ

ಇಂಪಾದ ಗಾನದಲು

ಜುಳಜುಳನೆ ಹರಿಯುತಿಹ ನದಿಯ ತೀರದಿಯೂ ನಾ

ತಳಮಳಿಸುತಿಹೆನಲ್ಲ್ಲಾ..

ಹೇಳಬಲ್ಲಿರಾ ಕಾರಣವ ನೀವು..??