ತಕರಾರು
ಅವಳು ಬಳಿಯಿದ್ದಾಗ
ನೂರಾರು ತಕರಾರು
ಬಳಿಯಿಲ್ಲ ಅವಳೀಗ
ಗೋಳು ಕೇಳೋರ್ಯಾರು?
ಚಳಿ
ಇರಬೇಕಿತ್ತು ನಾನೀಗ
ಅವಳ ಬಳಿಯಲ್ಲಿ
ಗಡ-ಗಡ ನಡುಗುವ
ಈ ಚಳಿಯಲ್ಲಿ!
ಜಾಗ
ಕನಸಿನಲ್ಲೂ ಜಾಗವಿಲ್ಲ
ಬೇರೆಯವರಿಗೆ ಬರಲು
ಮನಸಿನೊಳಗೆ ನೀನು
ಇರುವೆಯಲ್ಲ ಕಾವಲು
ಸಬೂಬು
ಯಾರಿಗಾದರೂ
ಸಬೂಬು ಹೇಳಬಹುದು
ಆದರೆ
ಮಡದಿಗಲ್ಲ.
ನೋಡಿದಾಗ
ಆ ಗಲ್ಲ
ಸುಳ್ಳು ಹೇಳಲು
ಆಗಲ್ಲ.
ಮಿನಿಕವನಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!