೧. ಜಮೀನಿನಲ್ಲಿ ವಿವಿಧ ಬೆಳೆಗಳ ಬೇಸಾಯ ಮತ್ತು ಬೆಳೆಪರಿವರ್ತನೆ.
೨. ಸಾವಯವ ವಸ್ತುಗಳು, ಕೃಷಿ ಮತ್ತು ಜಾನುವಾರು ತ್ಯಾಜ್ಯ ವಾಸ್ತುಗಳಿಂದ ಕಂಪೋಸ್ಟ್ ತಯಾರಿಸಿ, ಹೊಲ/ತೋಟಕ್ಕೆ ಹಾಕುವುದು.
೩. ಹೆಚ್ಚೆಚ್ಚು ಎರೆಹುಳ ಗೊಬ್ಬರ ತಯಾರಿಸಿ ಜಮೀನಿಗೆ ಸೇರಿಸುವುದು.
೪. ಸೆಣಬು, ಡಯಂಚ ಇಂತಹ ಹಾಸುರೆಲೆ ಗೊಬ್ಬರದ ಬೆಳೆ ಬೆಳೆದು ಅವು ಹೂ ಬಿಡುವ ಮುಂಚೆ ಹೊಲದ ಮಣ್ಣಿಗೆ ಸೇರಿಸುವುದು.
೫. ನೆಲಗಡಲೆ (ಶೇಂಗಾ), ಹೊಂಗೆ, ಹರಳು, ಬೇವು ಇಂತಹ ಎಣ್ಣೆ ಕಾಳುಗಳ ಹಿಂಡಿಯನ್ನು ಹೊಲ/ತೋಟಕ್ಕೆ ಗೊಬ್ಬರವಾಗಿ ಹಾಕುವುದು.
ಇವೆಲ್ಲದರಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗಿ, ಮುಖ್ಯ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!