ತುಮಕೂರಿನಲ್ಲಿ ಸಿರಿಧಾನ್ಯ ಮೇಳ :
ತುಮಕೂರು ವಿಶ್ವವಿದ್ಯಾಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮೊಟ್ಟಮೊದಲ ಬಾರಿಗೆ ಆಯೋಜಿಸಿದ್ದ "ಸಿರಿಧಾನ್ಯ ಮೇಳ" ೨೩ ಅಕ್ಟೋಬರ್ ೨೦೧೬ರಲ್ಲಿ ಮುಕ್ತಾಯವಾಯಿತು.ಇದನ್ನು ತುಮಕೂರು ವಿವಿ ಪ್ರಸಾರಾಂಗ, ನಬಾರ್ಡ್, ಧಾನ್ಯ ಸಂಸ್ಥೆ ಮತ್ತು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಜಂಟಿಯಾಗಿ ಸಂಘಟಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಶಾಂತಾರಾಂ ಸಿರಿಧಾನ್ಯಗಳ ಕಣಜವಾದ ತುಮಕೂರು ಜಿಲ್ಲೆಯಲ್ಲಿ ರೈತರನ್ನು ಪ್ರೋತ್ಸಾಹಿಸಲಿಕ್ಕಾಗಿ ಸಿರಿಧಾನ್ಯ ಸಂಸ್ಕರಣ ಘಟಕ ಸ್ಥಾಪನೆ ಬಗ್ಗೆ ಜಿಲ್ಲಾ ಪಂಚಾಯತ್ ಪರಿಶೀಲಿಸಲಿದೆ” ಎಂದರು.
ಸಿರಿಧಾನ್ಯ ಮೇಳಕ್ಕೆ ರಾಜ್ಯದ ಬೇರೆಬೇರೆ ಭಾಗಗಳಿಂದ ಬಂದ್ದಿದ್ದ ಮಹಿಳೆಯರು ತಮ್ಮತಮ್ಮ ಊರಿನ ವಿಶೇಷ ಸಿರಿಧಾನ್ಯ ತಿನಿಸುಗಳನ್ನು ಮೇಳದಲ್ಲಿ ಪ್ರದಶಿರ್ಸಿದರು .ಪೌಷ್ಟಿಕಾಂಶಗಳ ಆಗರವಾದ ಸಿರಿಧಾನ್ಯಗಳಿಂದ ತಯಾರಿಸಬಹುದಾದ ವಿವಿಧ ತಿನಿಸುಗಳ ಬಗ್ಗೆ, ಸಿರಿಧಾನ್ಯಗಳ ಅಡುಗೆ ಬಗ್ಗೆ ಮೇಳಕ್ಕೆ ಆಗಮಿಸಿದ್ದ ನೂರಾರು ಜನರು ಕುತೂಹಲದಿಂದ ವಿಚಾರಿಸಿ ತಿಳಿದುಕೊಂಡರು. ರಾಗಿ ಹಲ್ವಾ,ಸಜ್ಜೆರೊಟ್ಟಿ, ಸಾಮೆ ಪಾಯಸ, ನವಣೆ ಪಾಯಸ, ನವಣೆ ಉಪ್ಪಿಟ್ಟು, ಸಾಮೆಚಕ್ಕುಲಿ, ಇವು ಸಿರಿಧಾನ್ಯ ಮೇಳದಲ್ಲಿ ಜನಮನ ಗೆದ್ದ ಕೆಲವು ರುಚಿಕರ ತಿನಿಸುಗಳು .
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!