ಪಡುವಣದ ಭಾಸ್ಕರನ

ತಂಪಾದ ಬೆಳಕಲ್ಲಿ

ಇಂಪೆನಿಸುವಂತಿಹುದು

ತಿಳಿಗಾಳಿಯು...

ಸಾಲು ಗುಡ್ಡದ ಮೇಲೆ

ನೀರ ಪರದೆಯು

ಮೂಡಿ

ಬಾನು ಭುವಿಗಳ

ಸೇರಿಸುವ ಹುನ್ನಾರ

ನಡೆಸಿಹುದು....

ದಿನಕಳೆದ

ಬಸುರಿಯಂತಿಹ

ಕಾರ್ಮೋಡದಂಚಿನಲಿ

ಬೆಳ್ಳಿ ರೇಖೆಯ

ಭಾವಚಿತ್ರ....

ಭಗವಂತ ಬರೆದಂಥ

ಪ್ರೇಮಪತ್ರ.