ಪ್ರತಿದಿನವೂ ಜಾವದಲ್ಲೆದ್ದು
ಮಾರ್ಕೇಟಿಗೆ ಹೋಗುವೆ
ಒಳ್ಳೊಳ್ಳೆ ತರಕಾರಿ ಕೊಂಡು
ಅದನ್ನು ಮಾರುವೆ
ಬೆಳಗಿನಿಂದ ಸಂಜೆವರೆಗೆ ದುಡಿದರೆ
ಮಾರನೇಯ ದಿನ ದೂಡಬಹುದು
ಇಲ್ಲದಿದ್ದಲ್ಲಿ, ಹೊಟ್ಟೆಗೆ ಹಿಟ್ಟಿಲ್ಲ
ನೀರೇ ಗತಿ ಮನೆಯವರಿಗೆಲ್ಲ
ಸಂಜೆಯಾದರೆ ಸಾಕು, ಶುರು
ಖಾಕಿಯಿಂದ ನಿತ್ಯದಾತಿಥ್ಯ
'ವ್ಯಾಪರವಿಲ್ಲ, ಇಂದು ಬಿಡಿ', ಎಂದರೆ
ಜೀಪು ತೋರಿ, 'ಬಂದುಬಿಡಿ' ಎನ್ನುವರು
'ಸ್ವಾಮಿ, ನಮ್ಮ ಬಗ್ಗೆ ತೋರಿ
ಕೊಂಚ ಮಾನವೀಯತೆ', ಎಂದರೆ
ನಕ್ಕು ಹೇಳುವರು, 'ತೆಗಿ
ಮಾಮೂಲು, ಇಲ್ಲವೆ ಬಿಡು ಗಾಡಿ'
ಮಾನವೀಯತೆಯನ್ನೂ
ಖರೀದಿಸುವ ಕಾಲ ಬಂದಿದೆ
ಮಾನವುಳಿಸಿಕೊಳ್ಳಲು
ಬೆಲೆ ತೆರುವ ಕಾಲ ಬಂದಿದೆ
ಕೊಟ್ಟು ಮಾಮೂಲು, ಮಾನವೀಯತೆ ಕೊಳ್ಳುತಿರುವೆ..
ಇದಾಗಿದೆ ಮಾನವೀಯತೆಗೇ ಮಾಮೂಲು..
ಮಾಮೂಲು-ಮಾನವೀಯತೆ
ಕಾವ್ಯ ಓದುಗರಿಗೆ
ಎಲ್ಲ ಪುಸ್ತಕಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!