ಮೌನ ತುಂಬಿದ ಕಂಗಳಿಂದ
ಕಾದಿರುವೆ ನಲ್ಲ ನಿನಗಾಗಿ...
ನಿನ್ನೊಲವಿನ ನುಡಿಗಾಗಿ
ಹೃದಯ ಬಯಸಿದೆ ಮಗುವಾಗಿ...
ನೆನಪಿನ ಪುಟಗಳ ನಡುವೆ
ಅವಿತು ಕುಳಿತಿರುವೆಯಲ್ಲಾ..
ನೆನಪುಗಳ ನೆನಪಿನ ಜೊತೆಯಲ್ಲಿ
ದಿನ ಕಳೆದಿರುವೆನು ನಾನಿಲ್ಲಿ..
ನೆನಪಾದರೆ ಬಂದುಬಿಡು ಒಮ್ಮೆ..
ನಿನ್ನ ನೆನಪಿನ ಕ್ಷಣಗಳನು
ಜೋಪಾನ ಮಾಡಿ ಬಚ್ಚಿಟ್ಟಿರುವೆನು..
ನಿನ್ನ ನೆನಪಿನಂಗಳದಿಂದ ನೆನಪುಗಳು
ಮರೆಯಾಗುವ ಮುನ್ನವೇ
ಸೇರಬಾರದೇ ನನ್ನನೊಮ್ಮೆ...
ನೆನಪುಗಳ ಜೊತೆಯಲ್ಲಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!