ಮಂಕಾದ ದನಿಯು ಮಾತನು ನಿಲ್ಲಿಸಿತು
ಮೌನವೇ ನನಗೆ ಶಾಶ್ವತವಾಯಿತು
ಸಾವಿರ ನೆನಪುಗಳ ಜೋಳಿಗೆ ಹೊತ್ತಿ
ಅಮ್ಮನ ಮಡಿಲಲಿ ಕಂದಮ್ಮನಾಗುವ ಆಸೆ ಮರುಕಳಿಸಿತು
ಬೇಡವೆಂದರು ಬೀಡದ ನೆನಪುಗಳ ವಿರುದ್ಧ ನನ್ನಯ ಸಮರ
ಎದೆಯಲಿ ಕಾಡುತಿರುವ ಪ್ರಶ್ನೆಗಳು ಸಾವಿರ
ಮಂಕಾಗಿದೆ ಇಂದು ಸಮುದ್ರ ತೀರ
ಶಾಂತತೆಯೋ ಮರಣವೋ ಎಂದರಿಯುವುದು ಕಠೋರ
ಪ್ರತಿ ಉಸಿರು ಹೇಳುತಿದೆ ನಿನ್ನಯ ಹೆಸರ
ತುಟಿ ಬಿಚ್ಚಿ ಮಾತಾಡಲು ಇಂದೆಕೋ ಬೇಸರ
ಅರಿಯದೇ ಕಣ್ಣೀರಿನ ವಶವಾದೆ
ಅರಿತ ನಂತರವು ನಾ ಹೊರಬರದೇ ಹೋದೆ
ನಿನ್ನಯ ನೆನಪುಗಳೇ ಸಾಕು ಈ ಜೀವನಕೆ
ಅದ ಬಿಟ್ಟು ಬೇರೆನಿಲ್ಲ ನನ್ನಯ ಬೇಡಿಕೆ
ಬೇಡಿಕೆಯೋ ಕೋರಿಕೆಯೋ ನಾನರಿಯೆ
ನನ್ನ ಮನದಲ್ಲಿ ಎಂದಿಗೂ ನಿನ್ನಯ ಕಿನ್ನರಿಯೇ…
ಒಲವಿನ ಬಯಕೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!